Sunday 1 August 2010

ತಿರುಕ್ಕುಱಳ್: ಅಧ್ಯಾಯ 129-133



Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)



ಕಾಮ ವಿಭಾಗ: ಅಧ್ಯಾಯ: 129-133

ಅಧ್ಯಾಯ 129. ಸಮಾಗಮದ ಬಯಕೆ

1281. ಮನಸ್ಸಿನಲ್ಲಿ ನೆನೆದ ಮಾತಕ್ಕೇ ಮತ್ತೇರಿಸುವುದೂ, ಕಂಡ ಮಾತ್ರಕ್ಕೆ ಆನಂದವನ್ನನುಭವಿಸುವುದೂ- ಗುಣಗಳು ಕಳ್ಳಿಗೆ
         
ಇಲ್ಲ, ಕಾದುಕ್ಕೆ ಉಂಟು.
1282. ಪ್ರೇಮವು ತಾಳೆಮರದೆತ್ತರಕ್ಕೆ ಉಕ್ಕಿ ಹರಿದಾಗ, ಇನಿಯನೊಂದಿಗೆ ಒಂದು ಧಾನ್ಯದ ಕಾಳಿನಷ್ಟು ಪ್ರಣಯ ಕೋಪವನ್ನು
         
ತೋರದೆ ಇರಬೇಕು.
1283. ಪ್ರಿಯತಮನು ನನ್ನನ್ನು ಬಯಸದೆ ನಿರ್ಲಕ್ಷಿಸಿ, ತನ್ನ ಮನಸ್ಸಿಗೆ ಬಂದಂತೆ ನಡೆದುಕೊಂಡರೂ ಅವನನ್ನು ಕಾಣದೆ ನನ್ನ
         
ಕಣ್ಣುಗಳು ವಿಷ್ರಮಿಸುವುದಿಲ್ಲ.
1284. ಸಖೀ! ನಾನು ಅವನೊಡನೆ ಕಲಹ ಮಾಡಲು ಹೊರಟೆನಲ್ಲವೆ! ಆದರೆ ನನ್ನ ಮನಸ್ಸು ಅದನ್ನು ಮರೆತು ಅವನೊಡನೆ
         
ಕೂಡುವುದಕ್ಕೆ ಹಾತೊರೆಯಿತು.
1285. ಕಾಡಿಗೆ ಬಳಿಯುವಾಗ, ಕಾಡಿಗೆ ಕಡ್ಡಿಯನ್ನು ಕಾಣಲಾರದ ಕಣ್ಣುಗಳಂತೆ, ಪ್ರಿಯತಮನನ್ನು ಕಂಡಾದ ಮಾತ್ರ, ಅವನ
         
ದೋಷಗಳನ್ನೆಲ್ಲ ನೆನೆದುಕೊಳ್ಳದೆ ಮರೆತು ಬಿಡುವೆನು.
1286. ಪ್ರಿಯತಮನ ಸಮ್ಮುಖದಲ್ಲಿ ಅವರ ದೋಷಗಳನ್ನು ನಾನು ಕಾಣುವುದಿಲ್ಲ; ಅವರನ್ನು ಕಾಣದಿರುವ ಸಮಯದಲ್ಲಿ ಅವರ
         
ತಪ್ಪುಗಳಲ್ಲದೆ ಒಪ್ಪುಗಳನ್ನು ನಾನು ಕಾಣಲಾರಳಾಗಿದ್ದೇನೆ.
1287. ಪ್ರವಾಹವು ಸೆಳೆದುಕೊಂಡು ಹೋಗುವುದನ್ನು ಅರಿತೂ ಹರಿಯುವ ನೀರಲ್ಲಿ ಹಾಯುವವರಂತೆ,
         
ಪ್ರಯೋಜನವಿಲ್ಲದಿರುವುದನ್ನು ಅರಿಯೂ (ಪ್ರಿಯತಮನೊಂದಿಗೆ) ಪ್ರಣಯ ಕೋಪವನ್ನು ತೋರಿಸುವುದರಲ್ಲಿ ಏನು ಫಲವಿದೆ?
1288. ಕಳ್ಳನೇ! ಅವಮಾನಕರವಾದ ದುಃಖಗಳನ್ನು ತಂದೊಡ್ಡಿದರೂ ಅವು ಲೇರಿದವರಿಗೆ ಕಳ್ಳು ಹೇಗೆ ಪ್ರಿಯವೋ ಹಾಗೆ ನಿನ್ನ
         
ಎದೆಯು ನನಗೆ!
1289. ಪ್ರೇಮವು ಹೂವಿಗಿಂತ ಮೃದು; ಅದನ್ನು ಅರಿತು ಅದರ ಫಲವನ್ನು ಅನುಭವಿಸುವವರು ಕೆಲವರು ಮಾತ್ರವೇ.
1290. ನನ್ನ ಮನದರಿಸಿ ತನ್ನ ಕಣ್ಣೋಟದಲ್ಲಿ ಮುನಿಸನ್ನು ತೋರುತ್ತಲೇ ಗೊಂದಲಕ್ಕೀಡಾದಳು; ಅದರೂ ನನಗಿಂತ ಮುಂದಾಗಿ
         
ತಾನೇ ಆಲಿಂಗನಕ್ಕಾಗಿ ಅವಸರಪಟ್ಟುಳು.

ಅಧ್ಯಾಯ 130. ಮನಸ್ಸಿನೊಡನೆ ಕಲಹ

1291. ಹೃದಯವೇ, ಅವರ ಹೃದಯವು (ನನ್ನನ್ನು ನಿರ್ಲಕ್ಷಿಸಿ) ಅವರ ಇಚ್ಛಿಗನು ಗುಣವಾಗಿ ನಡೆಯುತ್ತಿರುವುದನ್ನು ತಿಳಿದೂ ನೀನು
         
ನನ್ನ ಸಂಗಾತಿಯಾಗಿರದೆ ಅವರೆಡೆಗೆ ಹಾರುತ್ತಿರುವೆಯೇಕೆ?
1292. ನನ್ನ ಹೃದಯವೇ! ಅವರು ನನ್ನ ಮೇಲೆ ಪ್ರೀತಿ ಇಲ್ಲದ ಕಟುಕರೆಂದು ತಿಳಿದೂ ನೀನು ಅವರು ಕೋಪಿಸಲಾರರೆಂದು
         
ಭಾವಿಸಿ ಅವರನ್ನು ಸೇರಿಕೊಳ್ಳುತ್ತಿದ್ದಿಯೇ!
1293. ಹೃದಯವೇ! ನೀನು ಇಚ್ಛಿಸಿದ ರೀತಿಯಲ್ಲಿಯೇ ಅವರ ಹಿಂದ ಹೋಗಲೆಳಸುವುದು "ಕೆಟ್ಟವಂಗೆ ಕೆಳೆಯಿಲ್ಲ" ಎಂಬ
         
ಭಾವನೆಯಿಂದಲೇ ಅಲ್ಲವೆ?
1294. ಹೃದಯವೇ! ಪ್ರಿಯತಮನೊಡನೆ ನೀನು ಮೊದಲು ಮುನಿಸಿಕೊಂಡು ನಂತರವೇ ಸುಖವುಣ್ಣಲೆಳಸಿದೆ; ಇನ್ನು ಮುಂದೆ
         
ಅಂಥ ಸನ್ನಿವೇಶಗಳಲ್ಲಿ ನಿನ್ನೊಡನೆ ಸಮಾಲೋಚಿಸುವವರು ಯಾರು?
1295. ಇನಿಯನನ್ನು ಪಡೆಯದಿರುವಾಗ, ಸ್ಥಿತಿಯನ್ನು ನೆನೆದು ಅಂಜುತ್ತದೆ; ಪಡೆದಾಗ, ಅಗಲಿಕೆಯನ್ನು ನೆನೆದು ಅಂಜುತ್ತದೆ.
          (
ರೀತಿ) ನನ್ನ ಹೃದಯವು ತೀರದ ದುಃಖಕ್ಕೆ ಭಾಗಿಯಾಗಿದೆ.
1296. ಪ್ರಿಯತಮನಿಂದ ದೂರವಾಗಿ ಒಭ್ಭಳೇ ಇದ್ದು, ಅವರ ಕಠಿಣ ಮನಸ್ಸನ್ನು ನೆನೆಯುತ್ತಿರುವಾಗಲೆಲ್ಲ, ದುಃಖವುಕ್ಕಿ ಬಂದು
         
ನನ್ನ ಹೃದಯವು ನನ್ನನ್ನೇ ತಿನ್ನುವ ಹಾಗೆ ಇತ್ತು!
1297. ಇನಿಯನನ್ನು ಮರೆಯಲಾರದ ನನ್ನ ಮಾನಗೆಟ್ಟ ಮೂರ್ಖ ಮನಸ್ಸಿನ ಹಿಡಿತಕ್ಕೆ ಸಿಕ್ಕಿಕೊಂಡು ಹೆಣ್ತನದ ನಾಚಿಕೆಯನ್ನು ಮರೆತಿದ್ದೇನೆ.
1298. ಜೀವದ ಮೇಲೆ ಪ್ರೀತಿಯಿಟ್ಟ ನನ್ನ ಹೃದಯವು, ಅಗಲಿದ ಇನಿಯನನ್ನು ನಿಂದಿಸಿದರೆ ಪರಿಹಾರವಾಗುವುದೆಂದು ಬಗೆದು, ಅವನ
         
ಉನ್ನತ ಗುಣಗಳನ್ನೇ ನೆನೆಯುತ್ತಿರುವುದು.
1299. ದುಃಖದ ಸಮಯದಲ್ಲಿ ತಮ್ಮಲ್ಲಿರುವ ಮನಸ್ಸೇ ಜತೆಯಾಗಿರದ ಪಕ್ಷದಲ್ಲಿ ಬೇರೆ ಯಾರು ಜತೆಯಾಗಬಲ್ಲರು?
1300. ತಮ್ಮಲ್ಲಿರುವ ಮನಸ್ಸೇ ನೆಂಟನಾಗಿ ಒದಗದ ಪಕ್ಷದಲ್ಲಿ, ಇತರರು ತಮ್ಮವರಾಗದಿರುವುದರಲ್ಲಿ ಆಶ್ಚರ್ಯವೇನಿದೆ!

ಅಧ್ಯಾಯ 131. ಸಖಿ ನಾಯಕಿಯೊಂದಿಗೆ

1301. ಅವನನ್ನು (ಪ್ರಿಯತಮನನ್ನು) ಅಪ್ಪಿಕೊಲದೆ, ಪ್ರಾಣಯ ಕೋಪದಿಂದ ತಿರಸ್ಕರಿಸು! ಅವನು ಅನುಭವಿಸುವ ವಿರಹ ದುಃಖವನ್ನು
         
ಸ್ವಲ್ಪ ನೋಡೋಣ.
1302. ಆಹಾರದಲ್ಲಿ ಉಪ್ಪು ಹಿತವಾಗಿ ಬರೆತಂತೆ ಪ್ರಣಯ ಕಲಹ ಕೂಡ; ಅದನ್ನು ಅತಿಯಾಗಿ ಬಳಸುವುದು, ಉಪ್ಪನ್ನು ಆಹಾರದಲ್ಲಿ
         
ಸ್ವಲ್ಪ ಹೆಚ್ಚಾಗಿ ಸೇರಿಸಿದಂತೆ
1303. ಪ್ರಣಯ ಕಲಹದಿಂದ  ಮುನಿಸಿಕೊಂಡು ದೂರವಿರುವ  ಪ್ರಿಯತಮೆಯೊಂದಿಗೆ ಆಗ್ರಘಪಟ್ಟು, ಅವಳನ್ನು ಆಲಿಂಗನ
         
ಮಾಡಿಕೊಳ್ಳದೆ ಬಿಡುವುದು, ಸುಃಖದಿಂದ ನೊಂದವರನ್ನು ಮತ್ತಷ್ಟು ವೇದನೆಗೆ ಗುರಿಮಾಡಿದಂತೆ.
1304. ಪ್ರಣಯ ಕಲಹದಲ್ಲಿ ಮುನಿಸಿಕೊಂಡವರನ್ನು ಸಮಾಧಾನಪಡಿಸಿ ಪ್ರೀತಿ ತೋರದಿರುವುದು ಮೊದಲೇ ಬಾಡುತ್ತಿರುವ
         
ಬಳ್ಳಿಯ ಬೇರನ್ನೇ ಕತ್ತರಿಸಿ ಹಾಕಿದಂತೆ.
1305. ಹೂವಿನಂತಹ ಕಣ್ಣುಗಳುಳ್ಳ ಕಾಮಿನಿಯರು ತೋರುವ ಪ್ರಣಯದ ಮುನಿಸಿನ ಸೊಬಗು, ಒಳ್ಳೆಯ ಗುಣವುಳ್ಳ ಸತ್ವರುಷರಿಗೆ
         
ಮರಗು ನೀಡುವುದು.
1306. ಪ್ರಣಯದ ಮುನಿಸೂ, ತಿರಸ್ಕಾರವೂ ಇಲ್ಲದ ಕಾಮಸುಖ, ಕಳಿತ ಹಣ್ಣೆನಂತೆಯೂ ಇನ್ನೂ ಮಾಗದ ಮಿಡಿಕಾಯಂತೆಯೂ-
         
ನಿಷ್ಫಲವಾಗಿ ಹೋಗುತ್ತದೆ.
1307. ಕೂಡಿ ಸುಖಿಸುವ ಪ್ರೀತಿಯು ಇನ್ನು ಮೇಲೆ ಹೆಚ್ಚು ಕಾಲ ಇರುವುದೋ ಇಲ್ಲವೋ ಎಂದು ಪರಿತಾಪದಿಂದ
         
ಆಲೋಚಿಸುವುದರಿಂದ, ಪ್ರಣಯ ಕೋಪದಲ್ಲಿಯೂ ಕೂಡ ಒಂದು ವಿಧವಾದ ದುಃಖವು ಹುದುಗಿರುತ್ತದೆ.
1308. ತನ್ನಿಂದ ಪ್ರಿಯನು ನೊಂದಿರುವನೆಂದು, ಅರಿಯಬಲ್ಲ ಪ್ರಿಯತಮೆಯು ಇಲ್ಲದಿರುವಾಗ, ಹಾಗೆ ದುಃಖಿಸುವುದರಿಂದ ಫಲವೇನು?
1309. ತಂಪಾದ ನೆಳಲಲ್ಲಿರುವ ನೀರು ಸಿಹಿಯಾಗಿರುವಂತೆ ಪ್ರಿಯರಾದವರೆಡೆಯಲ್ಲಿ ಪ್ರಣಯದ ಮುನಿಸೂ ಮಧುರವೆನ್ನಿಸುತ್ತದೆ.
1310. ಪ್ರಣಯದ ಮುನಿಸಿನಲ್ಲಿ, ಅರ್ಥಮಾಡಿಕೊಳ್ಳದೆ ಸೊರಗಿ ಬಿಟ್ಟುಹೋಗಿತ್ತಿರುವ,
        ಪ್ರಿಯತಮೆಯಲ್ಲಿ ನನ್ನ ಮನಸ್ಸು ಕೂಡಲೆಳಸುವುದಕ್ಕೆ ಕಾರಣ, ಅವಳ ಮೇಲಿನ ಪ್ರಬಲವಾದ ಇಚ್ಚೆಯಲ್ಲದೆ, ಬೇರೆಯಲ್ಲ.

ಅಧ್ಯಾಯ 132. ಕೋಪದ ಹರಿತ

1311. ಪರಸ್ತ್ರೀ ಸಂಗಾಭಿಲಾಷಿಯೇ! ಹೆಣ್ತನವುಳ್ಳವರೆಲ್ಲ ನಿನ್ನನ್ನು ಬಹಿರಂಗವಾಗಿ ತಮ್ಮ ಕಣ್ಣುಗಳಿಂದ ಭೋಗಿಸುವರು. ಅದ್ದರಿಂದ
         
ನಾನು ನಿನ್ನದೆಯನ್ನು ಸೇರಲಾರೆ!
1312. ನಾನು ಪ್ರಿಯನೊಂದಿಗೆ ಕೋಪದಿಂದ ಮುನಿಸಿಕೊಂಡಿರುವಾಗ, ನಾನು ಅವರನ್ನು ನಿಡುಗಾಲ ಬಾಳಲಿ ಎಂದು ಬಾಯಿ
         
ತೆರೆದು ಹೇಳುವನೆಂದು ಬಗೆದು ಅವರು (ಗಟ್ಟಿಯಾಗಿ) ನೀನಿದರು.
1313. ಕೊಂಬೆಗಳಲ್ಲಿ ಅರಳಿದ ಹೂಗಳನ್ನು ಬಯಸಿ ಮುಡಿದುಕೊಂಡರೂ, "ನೀವುನಿಮ್ಮ ಅಲಂಕಾರವನ್ನು ಯಾರೊಬ್ಬಳಿಗೋ
         
ತೋರಿಸಲು ಮುಡಿದುಕೊಂಡಿರಿ" ಎಂದು ಕೋಪಿಸಿಕೊಳ್ಳುವಳು.
1314. ಬೇರೆ ಯಾರಿಗಿಂತಲೂ ನಿನ್ನನ್ನೇ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ನಾನು ಹೇಳುವಾಗ "ಯಾರಿಗಿಂತ? ಯಾರಿಗಿಂತ?"
         
ಎಂದು ಮುನಿಸಿಕೊಂಡಳು.
1315. ಜನ್ಮದಲ್ಲಿ ನಾನು ನಿನ್ನನ್ನು ಅಗಲುವುದಿಲ್ಲ ಎಂದು ನಾನು ಹೇಳಿದಾಗ ಅವಳು ಕಣ್ಣು ತುಂಬ ನೀರು ತಂದುಕೊಂಡಳು.
          (
ಮರು ಜನ್ಮದಲ್ಲಿ ಅಗಲಿಕೆ ಬರುವುದೆಂದು ನೆನೆದು ಕಣ್ಣಲ್ಲಿ ನೀರು ತಂದುಕೊಂಡಳು)
1316. ನಿನ್ನನ್ನು ನೆನೆಸಿಕೊಂಡೆನೆಂದು ನಾನು ಹೇಳಿದಾಗ "ನೆನೆಸಿಕೊಳ್ಳುವುದರಲ್ಲಿಯೂ ಮರೆವು ಇರಬೇಕಲ್ಲವೆ? ಏಕೆ ಮರೆತಿರಿ"
         
ಎಂದು ನನ್ನನ್ನು ತಬ್ಬಿಕೊಳ್ಳದೆ ಮುನಿಸು ತೋರಿವಳು.
1317. ನಾನು ಸೀನಿದಾಗ ಅವಳು ನೂರ್ಗಲ ಬಾಳೆಂದು ಹರಸಿದಳು; ಒಡನೆಯೇ "ಯಾರು ನಿಮ್ಮನ್ನು ನೆನೆದುದರಿಂದ ಸೀನಿದಿರಿ?"
         
ಎಂದು ಕೇಳುತ್ತ ದುಃಖಿಸಿ ಅತ್ತಳು.
1318. (ಅವಳ ಮುನಿಸಿಗೆ ಅಂಜೆ) ನಾನು ಬಂದ ನೀನನ್ನು ಅಡಗಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಅವಳು ನಿಮ್ಮವರು
         
ಯಾರೋ ನಿಮ್ಮನ್ನು ನೆನೆಯುತ್ತಿರುವುದನ್ನು ನನ್ನಿಂದ ಮರೆಸಲು ಯತ್ನಿಸುತ್ತಿದ್ದೀರಾ- ಎಂದು ಹೇಳಿ ಅತ್ತಳು.
1319. ಅವಳು ಮುನಿಸಿಕೊಂಡಿರುವಾಗ ಅವಳನ್ನು ಸಂತಯಿಸ ಹೋದರೂ "ನೀವು ಇತರ ಸ್ತ್ರೀಯರಿಗೂ ಇದೇ ರೀತಿ ಮಾಡೂವಿರಿ"
         
ಎಂದು ಹೇಲಿ ಕೋಪವನ್ನು ತಾಳುವಳು.
1320. ಅವಳ ಚೆಲುವನ್ನು ನೆನೆದು ಮೌನವಾಗಿ ನೋಡುತ್ತಿರುವಾಗಲೂ "ನೀವು ಯಾರನ್ನು ನೆನೆದು ರೀತಿ ನೋಡುತ್ತಿರುವಿರಿ"
         
ಎಂದು ಕೇಳಿ ಕೋಪಗೊಳ್ಳುವಳು

ಅಧ್ಯಾಯ 133. ಪ್ರಣಯ ಕೋಪದ ಸೊಗಸು

1321. ಅವರಲ್ಲಿ ದೋಷವೊಂದೂ ಇಲ್ಲವಾದರೂ ಅವರೊಂದಿಗೆ ಪ್ರಣಯದ ಮುನಿಸಿ ತೋರುವುದರಿಂದ ಅವರು ನನ್ನ ಮೇಲೆ
         
ಅಧಿಕವಾದ ಪ್ರೀತಿ ತೋರುವಂತೆ ಮಾಡಬಲ್ಲುದು.
1322. ಪ್ರಣಯದ ಹುಸಿ ಮುನಿಸಿನಿಂದ ಕಾಣಿಸಿಕೊಳ್ಳುವ ಕಿರು ದುಃಖದಿಂದಾಗಿ, ಪ್ರಿಯತಮನ ನಿರ್ಮಲ ಪ್ರೀತಿಯು ಬಾಡಿದರೂ
         
ಅಂತ್ಯದಲ್ಲಿ ಅದು ಹಿರಿಮೆಯನ್ನು ಪಡೆಯುವುದು.
1323. ನೆಲದೊಂದಿಗೆ ನೀರು ಬೆರೆತಿರುವಂತಹ ಪ್ರೀತಿಯುಳ್ಳ ಪ್ರಿಯತಮನ ಬಳಿ ಪ್ರಣಯ ಕೋಪವನ್ನು ತೋರುವುದಕ್ಕಿಂತ ಸುಖ
         
ತರುವ ಸ್ವರ್ಗಲೋಕವು ಬೇರೆ ಉಂಟೋ!
1324. ಪ್ರಿಯತಮನನ್ನು ಅಪ್ಪಿಕೊಂಡು ಬಿಡದಿರಲು ಕಾರಣವಾದ ಪ್ರಣಯದ ಮುನಿಸಿನಲ್ಲಿ ನನ್ನ ಹೃದಯವನ್ನು ಒಡೆಯಬಲ್ಲ
         
ಅಸ್ತ್ರವೊಂದು ತೋರುತ್ತಿದೆ.
1325. ದೋಷವಿಲ್ಲದವರಾಗಿಯೂ ಪ್ರಿಯತಮೆಯ ಮುನಿಸಿಗೆ ಎರವಾಗಿ, ತಾವು ಪ್ರೀತಿಸುವ ಹೆಣ್ಣುಗಳ ಮೆದುದೋಳುಗಳನ್ನು ದೂರ
         
ಸರಿಸುವುದರಲ್ಲಿಯೂ ಒಣ್ದು ರೀತಿಯ ಸುಖವು ಇರುವುದು.
1326. ಮೇಲೆ ಮೇಲೆ ಊಟ ಮಾಡುವುದಕ್ಕಿಂತೆ, ಉಂಡುದನ್ನು ಅರಗಿಸಿಕೊಳ್ಳುವುದು ಸುಖ ತರುವುದು; (ಅದರಂತೆ) ಪ್ರೇಮದಲ್ಲಿ
         
ಕೂಡಿ ಮತ್ತೆ ಮತ್ತೆ ಸುಖಿಸುವುದಕ್ಕಿಂತ, ಪ್ರೇಮದ ಮುನಿಸೇ ಕಾಮಕ್ಕೆ ಮಿಗಿಲಾದ ಸುಖ ಕೊಡುವುದು.
1327. ಪ್ರನಯ ಕಲಹದಲ್ಲಿ ಸೋತವರೇ ಗೆದ್ದವರು; ಅದು ನಿಶ್ಚಯವಾಗಿ ಮುನಿಸು ತೀರದ ಮೇಲೆ ಕೂಡಿ ಆನಂದಿಸುವುದರಲ್ಲಿ
         
ವ್ಯಕ್ತವಾಗುವುದು.
1328. ಅವಳ ನೊಸಲು ಬೆವರುವಂತೆ ಕೂಡಿ, ಕಾಮ ಸುಖವನ್ನು ಇನ್ನೊಮ್ಮೆ ಅವಳ ಪ್ರಣಯದ ಮುನಿಸಲ್ಲಿರುವಾಗ ಪಡೆದು
         
ಆನಂದಿಸುವೆನಲ್ಲವೆ?
1329. ಚೆಲುವಿನ ಬೆಡಗುಗಾತಿ ಇನ್ನೂ ಪ್ರಣಯ ಮುನಿಸನ್ನು ತೋರುವವಳಾಗಲಿ! ನಾನು ಅವಳ ಮುನಿಸನ್ನು ತಣಿಸುವಂತೆ
         
ಬೇಡಿಕೊಳ್ಳಲು, ರಾತ್ರಿ ಕಾಲವು ಮತ್ತಷ್ಟು ದೀರ್ಘವಾಗಲಿ.
1330. ಪ್ರಣಯದ ಮುನಿಸು ಪ್ರೇಮಕ್ಕೆ ಸೊಗಸು; ಮುನಿಸು ತೀರದ ಮೇಲೆ ಕೂಡಿ ಅಪ್ಪಿಕೊಂಡರೆ ಮುನಿಸಿನ ಸೊಗಸಿಗೂ ಮಿಗಿಲು.

No comments:

Post a Comment