Sunday, 1 August 2010

ತಿರುಕ್ಕುಱಳ್: ಅಧ್ಯಾಯ 89-98

Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)ಅರ್ಥ ಭಾಗ: ಅಧ್ಯಾಯ: 89-98

ಅಧ್ಯಾಯ 89. ಒಳಹಗೆ


881. ತಂಪೆರೆಯಬಲ್ಲ ನೆಳಲೂ ನೀರೂ ಅಸುಖಕರವಾದರೆ ಅದರಿಂದ ಬಾಧೆಯುಂಟಾಗುವುದು; ಅದೇ ರೀತಿ ಬಂಧುಗಳ ಸ್ವಭಾವವು
       
ಅಹಿತಕರವಾಗಿದ್ದರೆ ಅದರಿಂದ ಕೆಡುಕೇ ಸಂಭವಿಸುವುದು.
882. ಕತ್ತಿಯಂತೆ ಬಹಿರಂಗವಾಗಿಯೇ ಪ್ರಕಟವಾಗುವ ಹಗೆಗಳಿಗೆ ಅಂಜಬಾರದು; ಆದರೆ ಗೆಳೆಯರಂತೆ ಪ್ರಕಟಿಸಿ ಒಳಗೆ ಹಗೆ
       
ಸಾಧಿಸುವವರ ಸಂಬಂಧದ ಬಗ್ಗೆ ಅಂಜೆ ಬೇಕು.
883. ಒಳ ಹಗೆಗೆ ಅಂಜಿ ತನ್ನನ್ನು (ತಾನು) ಕಾಪಾಡಿಕೊಳ್ಳಬೇಕು; ಇಲ್ಲವಾದರೆ ಕುಂಬಾರನ ಆಯುಧದಂತೆ, ದುರ್ಬಲಗಳಿಗೆಯಲ್ಲಿ, ತಪ್ಪದೆ
       
ಅಳಿವು ತರುತ್ತದೆ.
884. ಮನಸ್ಸು ಪರಿವರ್ತಿಸಲಾಗದ ಒಳಹಗೆಯು ಅರಸನಿಗೆ ಉಂಟಾದರೆ, ಅವನ ಸಂಬಂಧದವರಲ್ಲಿಯೇ ಅಸಮಾಧಾನವನ್ನು ಅದು
       
ಸೃಷ್ಟಿಸಿ, ಹಲವು ದುಃಖಗಳನ್ನು ಅವನಿಗೆ ತರುತ್ತದೆ.
885. (ದೊರೆಯಾದವನಿಗೆ) ತನ್ನ ಸಂಬಂಧದವರಲ್ಲಿಯೇ ಬಳಹಗೆಯು ಕಾಣಿಸಿಕೊಂಡರೆ, ಅಳಿವು ತರುವಂಥ ಹಲವು ದುಃಖಗಳನ್ನು
       
ಉಂಟುಮಾಡುತ್ತದೆ.
886. ತನ್ನ ಸಂಬಂಧಿಗಳಾದವರಲ್ಲೆ ಹಗೆಯು ಏರ್ಪಟ್ಟರೆ, ಅರಸನಾದವನಿಗೆ ದುಃಖಕರವಾದ ಮರಣವು ನಿಶ್ಚಯ.
887. ಭರಣಿಯು ತನ್ನ ಮುಚ್ಚಳದೊಂದಿಗೆ ಕೂಡಿಯೂ ಕೂಡಿಕೊಳ್ಳದಂತೆ ಇರುತ್ತದೆ; ಅದೇ ರೀತಿ ಒಳಹಗೆ ಏರ್ಪಟ್ಟ ಕುಟುಂಬವೂ
       
ತೋರಿಕೆಗೆ ಕೂಡಿಕೊಂಡಿದ್ದರೂ ಅಂತರಂಗ ಸಾಮರಸ್ಯವಿರುವುದಿಲ್ಲ.
888. ಒಳಹಗೆಯುಂಟಾದ ಸಂಸಾರವು ಅರದಿಂದ ತೇಯಲ್ಮಟ್ಟ ಕಬ್ಬಿಣದಂತೆ ಬಲವನ್ನು ಕಿಳಿದುಕೊಂಡು ದುರ್ಬಲವಾಗುತ್ತದೆ.
889. ಎಳ್ಳಿನ ಕಣದಷ್ಟು ಅತಿ ಕಿರಿದಾದ ಒಳ ಹಗೆ ಸುಳಿದರೂ ಕೂಡ ( ನಂಶವು) ಕೇಡಿನ ದಾರಿ ತುಳಿಯುತ್ತದೆ.
890. ಮನಸ್ಸಿನಲ್ಲಿ ಒಡುಂಬಡಿಕೆ ಇಲ್ಲದವರ ಸಹಬಾಳ್ವೆಯು, ಒಂದೇ ಗುಡಿಸಿಲೊಳಗೆ ಹಾವಿನೊಂದಿಗೆ ಕೂಡಿ ಬಾಳಿದಂತೆ.

ಅಧ್ಯಾಯ 90. ಹಿರಿಯನ್ನು ಹಳಿಯದಿರುವುದು.

891. ಸಮರ್ಥರ ಸಾಮರ್ಥ್ಯವನ್ನು ತೆಗಳದಿರುವುದೇ ತಮ್ಮನ್ನು ಕೇಡಿನಿಂದ ಕಾಯ್ದುಕೊಳ್ಳುವ ಕಾವಲಲ್ಲಿ ಹಿರಿದೆನಿಸುತ್ತದೆ.
892. ಬಲವಂತರೊಡನೆ ಅಗೌರವದಿಂದ ನಡೆದುಕೊಂಡರೆ, ಅವರ ಸಾಮರ್ಥ್ಯದಿಂದ, ಕೊನೆಯಿಲ್ಲದ ದುಃಖಕ್ಕೀಡಾಗಬೇಕಾಗುತ್ತದೆ.
893. ಅರಸನು ತಾನು ಕೆಟ್ಟು ನಾಶವಾಗಲು ಬಯಸಿದರೆ, ಬಲ್ಲಿದರೆದುರು ತಪ್ಪಿ ನಡೆಯಲಿ; ಅವರಲ್ಲಿ ನ್ಯಾಯ ನೀತಿಗಳನ್ನು ಅತಿಕ್ರಮಿಸಿ
       
ವರ್ತಿಸಲಿ!
894. ಬಲ್ಲಿದರಾದವರಿಗೆ, ಅಶಕ್ತರಾದವರು ಕೆಟ್ಟದ್ದನ್ನು ಮಾಡಿದರೆ, ತಾವೇ ಕೈಯಾರೆ, ಮೃತ್ಯುವನ್ನು ಆಹ್ವಾನಿಸಿದಂತೆ.
895. ಬಲಶಾಲಿಯಾದ ಅರಸನ ಹಗೆಗೊಳಗಾದವರು ತಲೆ ತಪ್ಪಿಸಿ ಎಲ್ಲಿಗೆ ಹೋದರೂ ಜೀವದಿಂದ ಉಳಿಯುವುದಿಲ್ಲ.
896. ಕಾಳ್ಗಿಚ್ಚಿನ ಬೇಗೆಗೆ ತುತ್ತಾದರೂ ಜೀವದಿಂದ ಉಳಿಯಬಹುದು. ಬಲಶಾಲಿಗಳಾದ ಅರಸರನ್ನು ಪೀಡಿಸಿದವರು ಜೀವಸಹಿತ
       
ಉಳಿಯುವುದು ಕಷ್ಟ.
897. ಮಹಾಮಹಿಮರಾದ ಸಚ್ಚರಿತರು ಕೋಪಿಸಿಕೊಂಡರೆ (ಅರಸನ) ಅರಸಾಂಗಗಳನ್ನು ಒಳಗೊಂಡ ಕೀರ್ತಿವೇತ್ತ ಬಾಳೂ
       
ಸಂಪನ್ಮೂಲಗಳೂ ಏನಾಗುವುದು?
898. ಪರ್ವತಸದೃಶರಾದವರನ್ನು ಅಗೌರವದಿಂದ ಕೀಳಾಗಿ ಕಂಡರೆ, ನೆಲದ ಮೇಲೆ ಭದ್ರವಾಗಿ (ವಂಶಪಾರಂಪರ್ಯವಾಗಿ) ನಿಂತವರು
       
ಕೂಡ ಅಳಿದು ಹೋಗುವರು.
899. ವ್ರತ ನೇಮಾದಿಗಳಿಂದ ನಿಷ್ಠರಾದ ಋಪಿಗಳು ಮೊನಿದರೆ, ದೇವತೆಗಳ ಅರಸನಾದ ಇಂದ್ರನು ಕೂಡ, ತನ್ನ ಸ್ಥಾನ ಕಳೆದುಕೊಂಡು
       
ಅಳಿದುಹೋಗುತ್ತಾನೆ.
900. ಪ್ರಬಲವಾದ ಸಿರಿಸಂಪತ್ತುಳ್ಳವರಾದವರೂ ಕೂಡ, ಕೀರ್ತಿಶಾಲಿಗಳೆನಿಸಿದ ಮಹಿಮಾನ್ವಿತರ ಹಗೆಯುಂಟಾದರೆ (ಒಡನೆಯೇ)
       
ನಾಶವಾಗುವರು.

ಅಧ್ಯಾಯ 91. ಹೆಣ್ಣು ಹೇಳಿದಂತೆ ಕೇಳುವುದು

901. ಹೆಂಡತಿ ಹೇಳಿದಂತೆ ಕೇಳಿ ನಡೆಯುವವರು ಶ್ರೇಷ್ಠವಾದ ಫಲವನ್ನು ಪಡೆಯಲಾರರು. ನಿಜವಾದ ಕರ್ತವ್ಯವನ್ನು ಬಯಸುವವರಿಗೆ
       
ಬೇಡವಾದ ಸಂಗತಿ ಅದುವೆ.
902. ಕರ್ತವ್ಯವನ್ನು ಮರೆತು ಹೆಂಡತಿಯ ಹೆಣ್ತನಕ್ಕೆ ಮನಸೋತವನ ಐಶ್ವರ್ಯವು ನಾಚಿಕೆಗೇಡಿನವಾಗಿ ಅವಮಾನವನ್ನು ತರುತ್ತದೆ.
903. ಗೃಹಿಣಿಯಾದವಳಿಗೆ ಹೆದರಿ ವಿವೇಚನೆಯಿಲ್ಲದೆ ನಡೆದುಕೊಳ್ಳುವವನು ಸಂಪನ್ನರ ನಡುವೆ ಅವಹೇಳನಕ್ಕೆ ಗುರಿಯಾಗುತ್ತಾನೆ.
904. ಗೃಹಿಣಿಯಾದವಳಿಗೆ ಅಂಜಿ, ಪರಲೋಕದ ಫಲವನ್ನು ಕಳೆದುಕೊಂಡವನಿಗೆ, ಕಾರ್ಯವನ್ನು ಸಾಧಿಸುವ ಶಕ್ತಿ ಇದ್ದರೂ ಅದು ಸಜ್ಜನರ
       
ಗೌರವಕ್ಕೆ ಪಾತ್ರವಾಗುವುದಿಲ್ಲ.
905. ಮನೆಯೊಡತಿಗೆ ಅಂಜಿ ಬಾಳುವವನು, ಯಾವಾಗಲೂ, ಸಜ್ಜನರಿಗೆ ಒಳ್ಳೆಯದನ್ನು ಮಾಡಲು ಅಂಜುವನು.
906. ಮನೆಯಾಕೆಯ ಬಿದಿರು ಕಾಂಡದಂಥ ನಳಿದೊಳಿನ ತೆಕ್ಕೆಗೆ ಅಂಜಿ ಬಾಳುವವರು ದೇವತೆಗಳಂತೆ ( ಲೋಕದಲ್ಲಿ) ಬಾಳಿದರೂ
       
ಹಿರಿಮೆ ಇಲ್ಲದವರೇ ಆಗುತ್ತಾರೆ.
907. ಹೆಣ್ಣಿನ ಆಜ್ಞೆಯನ್ನು ಶಿರಸಾವಹಿಸಿ ನಡೆಯುವವನ ಪುರುಷತ್ವಕ್ಕಿಂತ, ನಾಚಿಕೆಯೇ ಸ್ವಭಾವವಾಗುಳ್ಳ ಹೆಣ್ಣಿನ ಹಿರಿಮೆಯೇ ದೊಡ್ಡದು.
908. ಮೃದು ನೊಸಲಿನ ಮನೆಯಾಕೆಯ ಇಚ್ಛೆಯಂತೆ ನಡೆದುಕೊಳ್ಳುವವರು, ತಮ್ಮ ಸ್ನೇಹಿತರಿಗೆ ಒದಗಿದ ಕಷ್ಟಗಳನ್ನು ನೀಗಿಸಲಾರರು;
       
ಒಳ್ಲೆಯ ಕೆಲಸಗಳನ್ನೂ ಮಾಡಲಾರರು.
909. ಒಳ್ಳೆಯ ಧರ್ಮ ಕಾರ್ಯಗಳೂ, ಅದರಿಂದ ಗಳಿಸಿದ ಸಿರಿ ಸಂಪಾದನೆಯೂ, ಮತ್ತಿತರ ಕರ್ತವ್ಯಗಳೂ, ಹೆಣ್ಣಿನ ಆಜ್ಞಾಧಾರಿಗಳಾದವರಲ್ಲಿ
       
ಸೇರುವುದಿಲ್ಲ.
910. ಒಳ್ಳೆಯದನ್ನು ಆಲೋಚಿಸುವ ಮನಸ್ಸೂ ಅದರಿಂದ ಪಡೆದ ಸಿರಿಯೂ ಉಳ್ಳವರಲ್ಲಿ, ಹೆಣ್ಣಿನ ದಾಸ್ಯತೆಯಿಂದ ಉಂಟಾಗುವ
       
ಆಜ್ಞಾನವಿರುವುದಿಲ್ಲ.

ಅಧ್ಯಾಯ 92. ಸ್ವೇಚ್ಛಾ ಸ್ತ್ರೀಯರು

911. ಪ್ರೀತಿಯನ್ನು ಬಯಸದೆ (ಕೇವಲ) ಹಣವನ್ನು ಬಯಸುವ ಚೆಲುವ ಸ್ತ್ರೀಯರ (ವೇಶ್ಯೆಯರ) ಇನಿದಾದ ಮಾತುಗಳು ಒಬ್ಬನಿಗೆ
       
ದುಃಖವನ್ನು ತರುತ್ತವೆ.
912. ಲಾಭವನ್ನು ತೂಗಿ ನೋಡಿ ಅದಕ್ಕೆ ತಕ್ಕಂತೆ ನಯವಾದ ಮಾತುಗಳನ್ನಾಡುವ ಗುಣವುಳ್ಳ ಸ್ತ್ರೀಯರ ವರ್ತನೆಯನು ತೂಗಿ ನೋಡಿ,
       
ಅವರ ಪ್ರೀತಿಯನ್ನು ಅಲಕ್ಷಿಸ ಬೇಕು.
913. ಹಣವನ್ನೇ ಗುರಿಯಾಗುಳ್ಳ ವೇಶ್ಯಾ ಸ್ತ್ರೀಯರ ಹುಸಿ ಆಲಿಂಗನವು ಕತ್ತಲೆ ಕೋಣೆಯಲ್ಲಿ ಅಪರಿಚಿತ ಹೆಣವೊಂದನ್ನು ತಬ್ಬಿಕೊಂಡಂತೆ.
914. ದೈವ ಕೃಪೆಯ ಸಿರಿಯನ್ನು ಅರಸುವ ವಿಚಾರವಂತರು, ಹಣವನ್ನೇ ಮುಖ್ಯವಾಗಿ ಬಯಸುವ ವೇಶ್ಯೆಯರು ಕೂಡುವ ಕೀಳು ಸುಖವನ್ನು
       
ಆಶಿಸುವುದಿಲ್ಲ.
915. ಬುದ್ಧಿ ಸಾಮರ್ಥ್ಯದಿಂದ ಶ್ರೇಷ್ಠ ಅರಿವುಳ್ಳವರಾರೂ ಹಣದಾಸೆಗೆ ಎಲ್ಲರಿಗೂ ಪ್ರೀತಿ ತೋರುವ ವೇಶ್ಯೆಯರ ಅಳಿಯೊಲಿವಿಗೆ
       
ದಾಸರಾಗುವುದಿಲ್ಲ.
916. ಆತ್ಮೋನ್ನತಿಯನ್ನು ಅರಸುವವರು, ತಮ್ಮ ಚೆಲುವಿನಿಂದ ಮರುಳುಗೊಳಿಸಿ ಕೀಳು ಸುಖ ನೀಡುವ ವೇಶ್ಯೆಯರ ತೋಳ ಅಪ್ಪುಗೆಯಲ್ಲಿ
       
ಸೇರುವುದಿಲ್ಲ.
917. ಅನಂಭವದಿಂದ ಶ್ರಿಮಂತವಾದ ಮನಸ್ಸು, ಇಲ್ಲದವರು, ತಮ್ಮ ಮನಸ್ಸಿನಲ್ಲಿ ಇತರ ವಸ್ತುಗಳನ್ನು ಬಯಸಿ ಕೂಡಲೆಳಸುವ ವೇಶ್ಯೆಯರ
       
ತೋಳ್ತೆಕ್ಕೆಯಲ್ಲಿ ಸೆರೆಯಾಗುವರು.
918. ವಿಚಾರ ಮಾಡಿ ನೋಡುವ ಶಕ್ತಿಯಿಲ್ಲದವರಿಗೆ, ಮಾಯಾಂಗನೆಯರ (ವೇಶ್ಯೆಯರ) ಅಪ್ಪುಗೆಯು, ಮೋಹಿನಿ ಹಿಡಿದ ಹಾಗೆ ಎಂದು
       
ಬಲ್ಲವರು ಹೇಳುವರು.
919. ದೊಡ್ಡವರು, ಅಲ್ಪರು ಎನ್ನದೆ ಬೆಲೆಕೊಟ್ಟು ಕೊಳ್ಳುವ ಯಾರನ್ನೂ ಅಪ್ಪುವ ಲಜ್ಜೆಗೆಟ್ಟ ವೇಶ್ಯಾಂಗನೆಯರ ಮೆದುದೋಳು, ಹಿರಿಮೆಯಿಲ್ಲದೆ
       
ಕೀಳು ಜನರು ಬೀಳುವ ಸರಕದಂತೆ.
920. ಇಬ್ಬಗೆಯ ಮನಸ್ಸುಳ್ಳ ವೇಶ್ಯಾಂಗನೆಯರು, ಕಳ್ಳು ಮತ್ತು ಜೂಜು ಇವು ಮೂರೂ ಸಿರಿಯಳಿದ ದರಿದ್ರರ ಒಡನಾಡೀಗಳು.

ಅಧ್ಯಾಯ 93. ಕಳ್ಳು ಕುಡಿಯದಿರುವಿಕೆ

921. ಕಳ್ಳನ್ನು ಪ್ರೀತಿಸಿ ಅದಕ್ಕೆ ದಾಸರಾಗಿರುವ ಅರಸರು ಯಾವಾಗಲೂ, ಹಗೆಗಳಲ್ಲಿ ಭೀತಿಯನ್ನುಂಟು ಮಾಡಲಾರರು; ಪ್ರತಿಯಾಗಿ ತಮ್ಮ
       
ಕೀರ್ತಿಯನ್ನು ಕೆಡಿಸಿಕೊಳ್ಳುವರು.
922. ಕಳ್ಳನ್ನು ಕುಡಿಯಬಾರದು; ಸಜ್ಜನರ ಗೌರವಕ್ಕೆ ಪಾತ್ರರಾಗಲು ಇಚ್ಛಿಸದವರು ಬೇಕಾದರೆ ಕುಡಿಯಲಿ!
923. ಮಗ ಹೇಗ ನಡೆದುಕೊಂಡರೂ ತಾಯಿಗೆ ಇಷ್ಟವೇ ಆಗುವುದಾದರೂ ಕಳ್ಳು ಕುಡಿದು ಅಮಲಿನಲ್ಲಿ ಸ್ವೇಚ್ಛಿಯಾಗಿ ವರ್ತಿಸುವುದು
       
ಅವಳಿಗೆ ಸಹಿಸದು; ಹಾಗಿರುವಾಗ ಸಜ್ಜನರ ಮುಂದೆ ಕುಡಿದು ಸ್ವೇಚ್ಛಿಯಾಗಿ ವರ್ತಿಸಿದರೆ ಹೇಗೆ ಸಹಿಸಬಲ್ಲರು?
924. ಕಳ್ಳು ಕುಡಿಯುವ, ತ್ಯಾಜ್ಯಾವಾದ ದೊಡ್ಡ ಅಪರಾಧ ಮಾಡೀದವರಿಗೆ ನಾಚಿಕೆಯೆಂಬ ಸಜ್ಜನ ವಧು ಬೆನ್ನು ತೋರಿಸಿ ಹೊರಟು
       
ಹೋಗುವಳು.
925. ಹಣ ತೆತ್ತು ಮೈಯರಿಯದ ಸ್ಥಿತಿಯನ್ನು ತಂದುಕೊಳ್ಳುವುದು, ತಾನು ಮಾಡುವ ಕೆಲಸದ ಅರಿವುಗೇಡಿತನವನ್ನು
       
ಸಂಪಾದಿಸಿದಂತೆಯೇ.
926. ಕಳ್ಳಿನ ಅಮಲಿನಲ್ಲಿ ಮೈಮರೆತು ಮಲಗಿದವರು ಸತ್ತವರಿಗಿಂತ ಬೇರೆ ಅಲ್ಲ; ಕಳ್ಳು ಕುಡಿದವರು ನಂಜುಣ್ಣುವವರೆ ಆಗುತ್ತಾರೆ.
927. ಕಳ್ಳಿಗೆ ಸೋತು ಬಲಿಯಾದವರು, (ತಮ್ಮ ಅಮಲಿನಿಂದ) ಯಾವಾಗಲೂ, ತಮ್ಮ ಮನಸ್ಸನ್ನು ಪ್ರಕಟಪಡಿಸಿ ಊರ ನಗೆಗೆ
       
ಪಾತ್ರರಾಗುವರು.
928. "ನಾನು ಕಳ್ಳು ಕುಡಿದರಿಯೆನು" ಎಂದು ಕಳ್ಳು ಕುಡಿಯುವವನು ಹೇಳುವುದನ್ನು ಕೈಬಿಡಬೇಕು; ಅವನು ಕಳ್ಳು ಕುಡಿದಾಗಲೇ ಅವನ
        
ಮನಸ್ಸಿನೊಳಗಿನ ದೌರ್ಬಲ್ಯವೆಲ್ಲ ಹೊರಗೆ ಬರುವುದು.
929. ಕುಡಿದ ಅಮಲಿನಲ್ಲಿರುವವನಿಗೆ ಕಾರಣ ಹೇಳಿ ತಿಳಿಯಪಡಿಸುವುದು, ನೀರಿನಡಿಯಲ್ಲಿ ಮುಳುಗಿದವನನ್ನು, ಕೊಳ್ಳಿ ದೀಪವನ್ನು
       
ಹಿಡಿದುಕೊಂಡು ಅರಸಿದಂತೆ.
930. ಒಬ್ಬನು ತಾನು ಕಳ್ಳು ಕುಡಿಯದಿರುವಾಗ, ಕಳ್ಳಿನ ಅಮಲಿನಲ್ಲಿ ಇರುವವನನ್ನು ಕಂಡಾದ ಕಳ್ಳು ಕುಡಿಯುವುದರಿಂದ ಆಗುವ ಕೆಡುಕನ್ನು
       
ಯೋಚಿಸಲಾರನೆ?

ಅಧ್ಯಾಯ 94. ಜೂಜು

931. ಜೂಜಿನಲ್ಲಿ ಗೆಲುವುದಾದರೂ ಜೂಜನ್ನು ಬಯಸಬಾರದು; ಗೆಲ್ಲುವಿಕೆ ಕೂಡ, ಗಾಳದ ತುದಿಯ ಲೋಹವನ್ನು ಮೀನು (ಆಹಾರವೆಣ್ದು
       
ಎಣಿಸಿ) ನುಂಗಿದಂತೆ.
932. ಒಂದನ್ನು ಗೆದ್ದು ನೂರ್ಮಡಿಯಾಗಿ ಕಳೆದುಕೊಳ್ಳುವ ಜೂಜು ಕೋರರಿಗೆ ಸುಖ ಪಡೆದು ಬಾಳುವ ಮಾರ್ಗವುಂಟೆ?
933. (ಅರಸನಾದವನು) ಉರುಳುವ ದಾಳವನ್ನು ಊಹಿಸಿ ಹೇಳಿ ಬರುವ ಹಣವನ್ನು ಎಡೆಬಿಡದೆ ತೊಡಗಿಸಿ ಜೂಜಾಡಿದರೆ, ಅವನ
       
ಗಳಿಕೆಯು ಕೈತಪ್ಪಿ ಹೋಗಿ ಇತರರ (ಹಗೆಗಳ) ಕೈ ಸೇರುವುದು.
934. ಹಲವು ತೆರದ ದುಃಖಗಳನ್ನು ತಂದೊಡ್ಡಿ ಕೀರ್ತಿಯನ್ನು ಅಳಿಸುವ ಜೂಜಿಗಿಂತ ದಾರಿದ್ರ್ಯ ತರುವುದು ಬೇರೊಂದಿಲ್ಲ.
935. ದ್ಯೂತದ ದಾಳಗಳನ್ನು ಆಡುವ ಕೂಟವನ್ನು ತಮ್ಮ ಕೈಬಳಕವನ್ನೂ ಮೆಚ್ಚಿ ಬಯಸಿ ಕೈಬಿಡಲಾರದ ಅರಸರು ಸಿರಿಯಲ್ಲಿ
       
ಕಳೆದುಕೊಂಡು ದರಿದ್ರರಾರುತಾರೆ.
936. ಜೂಜು ಎನ್ನುವ ಮೂದೇವಿಯ ವಶವಾದದರು ಬದುಕ್ಕಿದ್ದಾಗ ತಾವು ತಮ್ಮ ಹೊಟ್ಟೆ ತುಂಬ ಉಣ್ಣದೆ ಹಲವು ದುಃಖಗಳಿಂದ
       
ಬಾಧಿಸಲ್ಪಟ್ಟು ನರಕಕೆ ಹೋಗುವರು.
937. ಜೂಜಡುವ ಕೂಟದಲ್ಲಿ ಅರಸನು ಧರ್ಮ, ಅರ್ಥ, ಕಾಮಗಳನ್ನು ಮೀರಿ ಕಾಲಹರಣ ಮಾಡಿದರೆ, ಪರಂಪರಯಾಗಿ ಅವನಿಗೆ ಬಂದ
       
ಸಿರಿಸಂಪತ್ತುಗಳೂ ಮತ್ತು ಸ್ವಾಭಾವಿಕವಾದ ಸದ್ಗುಣಗಳೂ ನಾಶವಾಗಿ ಹೋಗುತ್ತವೆ.
938. ಜೂಜು ಹಣವನ್ನು ಕಳೆದುಕೊಂಡು ಸುಳ್ಳು ಹೇಳುವಂತೆ ಮಾಡುವುದು; ದೈವ ಕೃಪಯನ್ನು ಕೆಡಿಸಿ ಹಲ ತೆರನಾದ  ದುಃಖಗಳನ್ನು
        (
ಇಹಪರಗಳೆರಡರಲ್ಲೂ) ತಂದೊಡ್ಡುವುದು.
939. ಒಬ್ಬನು ಜೂಜಾಡುವುದನ್ನು ಕೈಗೊಂಡರೆ, ಉಡುಪು, ಸಿರಿ, ಆಹಾರ, ಕೀರ್ತಿ ಮತ್ತು ಜ್ಞಾನವೆಂಬ ಐದು ಅವನಿಂದ ಮರೆಯಾಗುತ್ತವೆ.
940. ಇಹಪರಗಳೆರಡರಲ್ಲಿಯೂ ಒಬ್ಬನನ್ನು ಕೀಳಾಗಿ ಮಾಡಿ, ದುಃಖದಿಂದ ಕಷ್ಟಕ್ಕೇಡು ಮಾಡೂವುದು ಅವನು ಬಯಸುವ ಜೂಜು; ಅದೇ
       
ರೀತಿ, ಜೀವದ ಮೇಲಿನ ವ್ಯಾಮೋಹವೂ- (ಮನುಷ್ಯನ) ದುಃಖವನ್ನು ಹೆಚ್ಚಿಸಿ ಅವನನ್ನು ತೋದರೆಯಲ್ಲಿ ಸಿಲುಕಿಸುವುದು.

ಅಧ್ಯಾಯ 95. ಮದ್ದು

941. ಊಟದಲ್ಲಿ ಅಳತೆ ಮೀರಿ ಹೆಚ್ಚಾದರೂ, ಕರ್ಮಿಯಾದರೂ ವೈದ್ಯಶಾಸ್ತ್ರಜ್ಞರು ಸೂಚಿಸಿರುವ ವಾತ, ಪಿತ್ತ, ಕಫ ಮೂರೂ
        (
ಮನುಷ್ಯನಿಗೆ) ಬೇನೆಯುಂಟಾಗುತ್ತವೆ.
942. ಮುಂಚಿತವಾಗಿ ಉಂಟ ಆಹಾರವು ಜೀರ್ಣವಾದುದನ್ನು ಅರಿತು ಮತ್ತೆ ಉಂಟರೆ, ಶರೀರಕ್ಕೆ ಔಷಧ (ಮದ್ದು) ವೇ ಬೇಕಾಗುವುದಿಲ್ಲ.
943. ಮುಂಚಿತವಾಗಿ ಸೇವಿಸದ ಆಹಾರ ಜೀರ್ಣವಾದ ಮೇಲೆ ಅಳತೆಯರಿತು ಊಟ ಮಾಡಬೇಕು; ಅದೇ ದೇಹಧಾರಿಯಾದ ಮಾನವನ್ನು
       
ನಿಡುಗಾಲ ಬಾಳುವ ಮಾರ್ಗ.
944. ಆಹಾರವು ಚೆನ್ನಾಗಿ ಜೀರ್ಣವಾದುದನ್ನು ಅರಿತುಕೊಂಡು, ಪೂರ್ತಿ ಹಸಿದ ಮೇಲೆ ಶರೀರಕ್ಕೆ ಒಗ್ಗುವ ಆಹಾರವನ್ನು ನಿಯಮಿತವಾಗಿ
       
ತಿನ್ನಬೇಕು.
945. ಶರೀರಕ್ಕೆ ಒಗ್ಗುವಂಥ ಆಹಾರವನ್ನು ಮಿತಿಯರಿತು ಊಟ ಮಾಡಿದರೆ ಜೀವಕ್ಕೆ ಯಾವ ಅಪಾಯವೂ ಉಂಟಾಗುವುದಿಲ್ಲ.
946. ತನಗೆ ಕೆಡುಕು ಯಾವುದೆಂದು ತಿಳಿದು ಮಿತಿಯರಿತು ಊಟ ಮಾಡೂವವನ ಬಳೀ ಸುಖವು ಬಂದು ನಿಲ್ಲುವಂತೆ, ಅತಿಯಾಗಿ
       
ತಿನ್ನುವವನ ಬಳಿ ರೋಗವು ಬಂದು ನೆಲಸುತ್ತದೆ.
947. ಜೀರ್ಣಿಸಿಕೊಳ್ಳುವ ಶಕ್ತಿ ಮೀರಿ, ವಿಚಾರ ಮಾಡದೆ ಅತಿಯಾಗಿ ತಿಂದರೆ ರೋಗಗಳು ಎಲ್ಲೆ ಮೀರಿ ಬೆಳೆಯುತ್ತವೆ.
948. ವೈದ್ಯನಾದವನು, ರೋಗವನ್ನೂ ರೋಗದ ಕಾರಣವನ್ನೂ ಪರೀಕ್ಷಿಸಿ ತಿಳಿದು ಅದನ್ನು ಪರಿಹರಿಸುವ ಮಾರ್ಗವನ್ನು ಕಂಡುಹಿಡಿದು,
       
ಸೂಕ್ತ ಚಿಕಿತ್ಸೆಯನ್ನು ಕೈಗೊಳ್ಳಬೇಕು.
949. ವೈದ್ಯಶಾಸ್ತ್ರಬಲ್ಲವನು, ರೋಗಿಯ ಸ್ಥಿತಿಯನ್ನೂ ರೋಗದ ಅವಸ್ಥೆಯನ್ನೂ ರೋಗದ ಕಾಲಾವಧಿಯನ್ನೂ, ವಿಚಾರಮಾಡಿ (ಪರಿಶೀಲಿಸಿ)
       
ಹೊಂದುವ (ಚಿಕಿತ್ಸೆ) ನೀಡಬೇಕು.
950. ರೋಗಿ, ವೈದ್ಯ, ಔಷಧಿ ಮತ್ತು ಔಷಧಿ ತಯಾರಿಸಿ ಕೊಡುವವನು- ಎಂದು ವೈದ್ಯ ವಿದ್ಯೆಯಲ್ಲಿ ನಾಲ್ಕು ವಿಭಾಗಗಳನ್ನು
       
ಒಳಗೊಂಡಿರುವುದು.

ಅಧ್ಯಾಯ 96. ಕುಲದ ಹಿರಿಮೆ

951. ನ್ಯಾಯಪರತೆ, ವಿನಯಶೀಲತೆ ಇದೆರಡೂ ಸತ್ಕುಲ ಸಂಭೂತರಲ್ಲಿ ಮಾತ್ರ ಸಹಜವಾಗಿರುತ್ತವೆ; ಬೇರೆಯವರಲ್ಲಿ ಇರುವುದಿಲ್ಲ.
952. ಸತ್ಕುಲದಲ್ಲಿ ಹುಟ್ಟಿದವರು, ಸನ್ಮಾರ್ಗ, ಸತ್ಯಸಂಧತೆ, ವಿನಯಶೀಲತೆ- ಮೂರು ಗುಣಗಳಿಂದ ಎಂದೂ ಜಾರುವುದಿಲ್ಲ
953. ಸತ್ಕುಲಜರಿಗೆ, ಮೃದುಹಾಸ, ಕೊಡುಗೈ, ಇನಿವಾತು ಪರನಿಂದೆ ಇಲ್ಲದ ಸ್ವಭಾವ- ನಾಲ್ಕು ಗುಣಗಳು ಆವಶ್ಯವೆಂದು ಬಲ್ಲವರು
       
ಹೇಳುವರು.
954. ಕೋಟಿಗಟ್ಟಲೆ ಐಶ್ವರ್ಯ ಪಡೆಯುವ ಅವಕಶವಿದ್ದರೂ, ಸತ್ಕುಲ ಸಂಭೂತರೂ ತಮ್ಮ ಕಾಲಕ್ಕೆ ಕುಂದು ತರುವ ಕೆಲಸಗಳನ್ನು
       
ಮಾಡೂವುದಿಲ್ಲ.
955. ಸತ್ಕುಲಜರು, ಉದಾರವಾಗಿ ದಾನ ಮಾಡೂವುದರಿಂದ ತಾವು ಬರಿಗೈಯವರಾದರೂ, ಪರಂಪರಾಗತವಾಗಿ ಬಂದ
       
ಕುಲಮರ್ಯಾದೆಯು ಗುಣಗಳಿಂದ ವಿಮುಖರಾಗುವುದಿಲ್ಲ.
956. ಕಳಂಕರಹಿತವಾದ ಕುಲ ಮರ್ಯಾದೆತೊಡನೆ ಬಾಳಬೇಕೆಂದು ಒಯಸುವವರು ವಂಚನೆಯಿಂದ ಯೋಗ್ಯವಲ್ಲದ್ದನ್ನು ಮಾಡುವುದಿಲ್ಲ.
957. ಶ್ರೇಷ್ಠವಾದ ಕುಲದಲ್ಲಿ ಜನಿಸಿದವರಲ್ಲಿ, ನಿಚ್ಚಳವಾಗಿ ಕಾಣುವ ದೋಷವು, ಆಕಾಶದಲ್ಲಿ ಬೆಳಗುವ ಚಂದ್ರನಲ್ಲಿರುವ ಕಳಂಕದಂತೆ
       
ಸ್ಪಷ್ಟವಾಗಿ ತೋರುವುದು.
958. (ಒಬ್ಬನಲ್ಲಿರುವ) ಒಳ್ಳೆಯ ಗುಣಗಳ ನಡುವೆ, ನಿರ್ದಯ ಪ್ರವೃತ್ತಿ ತೋರಿ ಬಂದರೆ ಅವನ ಕುಲದ ಹಿರಿಮೆಯ ಬಗ್ಗೆ
       
ಸಂದೇಹಪಡಬೇಕಾಗುವುದು.
959. ಒಳ್ಳೆಯ ನೆಲದ ಗುಣವನ್ನು ಮೊಳಕೆಯಲ್ಲಿ ಕಾಣುವಂತೆ ಉತ್ತಮ ಕುಲ ಸಂಭೂತರ ಗುಣಗಳನ್ನು ಅವರ ಮಾತಿನಲ್ಲಿ ಕಾಣಬಹುದು.
960. ಒಬ್ಬನಿಗೆ ಒಳ್ಲೆಯದಾಗಬೇಕೆಂದಿದ್ದರೆ ವಿನಯಶೀಲನಾಗಿರಬೇಕು; ಒಳ್ಳೆಯ ಕುಲಜನೆನಿಸಿಕೊಳ್ಳಬೇಕೆಂದಿದ್ದರೆ ಎಲ್ಲರಿಗೂ ತಗ್ಗ
       
ನಡೆಯಬೇಕು.

ಅಧ್ಯಾಯ 97. ಮಾನ

961. ಪ್ರಾಣವೆ ಕೋಗುವಂಥ ಅನಿವಾರ್ಯವಾದ ಕಾರಣಗಳಿದ್ದರೂ ಕುಲ ಗೌರವವನ್ನು ಕೀಳುಮಾಡುವಂಥ ಕಾರ್ಯಗಳನ್ನು ಕೈಬಿಡಬೇಕು.
962. ಕೀರ್ತಿಯೊಡನೆ ಮನಧನವನ್ನು ಬಯಸುವವರು ತಮ್ಮ ಕೀರ್ತಿ ಬಯಸುವ ಸಂದರ್ಭ ಬಂದರೂ ತಮ್ಮ ಕುಲದ ಹಿರಿಮೆ ಕೆಡುವಂಥ
       
ಕಾರ್ಯಗಳನ್ನು ಮಾಡ ಬಯಸುವುದಿಲ್ಲ.
963. ಸಿರಿಯು ಏರುತ್ತಿರುವ ಕಾಲದಲ್ಲಿ ತಗ್ಗಿ ನಡೆಯಬೇಕು; ಸಿರಿಯು ಕರಗಿ ಕುಗ್ಗುತ್ತಿರುವ ಕಾಲದಲ್ಲಿ ತಲೆಯೆತ್ತಿ ನಡೆಯಬೇಕು.
964. ಮನುಷ್ಯರು ಉನ್ನತವಾದ ಸ್ಥಿತಿಯಲ್ಲಿದ್ದು ನೆಲೆಯಿಂದ ಕೆಳಗಿಳಿದಾಗ, ತಲೆಯಿಂದ ಉದುರಿ ಬಿದ್ದ ಕೂದಲಿನಂತಾಗುತ್ತಾರೆ.
        (
ಅಂದರೆ- ಉದುರಿ ಹೋದ ಕೂದಲಿನಂತೆ ಜನರ ನಿರ್ಲಕ್ಷ್ಯಕ್ಕೀಡಾಗುತ್ತಾರೆ)
965. ಬೆಟ್ಟದಂತೆ ಎತ್ತರವಾಗಿ ನಿಂತ ನೆಲೆಯಲ್ಲಿ ಉಳ್ಳವರೂ ಗುಲುಗುಂಜಿಯಷ್ಟು ಅಲ್ಪ ಕಾರ್ಯವನ್ನು ಮಾಡೀದರೆ ಕೀಳಾಗಿ ಬಿಡುವರು.
966. ಮನವನ್ನು ಬಿಟ್ಟು ತಮ್ಮನ್ನು ತೆಗಳುವವರನ್ನು ಹಿಂಬಾಲಿಸುವ ಗುಣವಿದ್ದರೆ ಕೀರ್ತಿಯೂ ಲಭಿಸದು, ದೇವಲೋಕದಲ್ಲಿಯೂ ಪ್ರವೇಶ
       
ದೊರೆಯುದು; ಅಂದಮೇಲೆ ಅದರಿಂದ ಲಾಭವೇನು?
967. ಗೌರವ ನೀಡದೆ ಅಲಕ್ಷಿಸುವವರ ಹೀಂದ (ಯಾಚಕರಾಗಿ) ಸೇರಿ, ಬಾಳುವೆ ಮಾಡುವುದಕ್ಕಿಂತ, ತನ್ನ ಪೂರ್ವ ಸ್ಥಿತಿಯಲ್ಲಿಯೇ ಕೆಟ್ಟು
       
ನಾಶವಾದನು ಎಂದು ಜನರಿಂದ ಅನ್ನಿಸಿಕೊಳ್ಳುವುದು ಒಳ್ಳೆಯದು.
968. ಒಬ್ಬನು ಉನ್ನತಿಕೆಯು ಅಳಿತು ಮಾನ ಕಳೆದುಕೊಳ್ಳುವ ಸ್ಥಿತಿ ಬಂದಾಗ, ಸಾಯದೆ, ಶರೀರವನ್ನು ಹೊತ್ತುಕೊಂಡು ಬಾಳುವುದರಿಂದ
       
ಶಾಂತಿ ಸಿಗಬಲ್ಲುದೆ?
969. ತಮ್ಮ ಮಾನವು ಅಳಿಯುವ ಕಾಲದಲ್ಲಿ ಸಾವನ್ನು ಅಪ್ಪುವವರು ತನ್ನ ಅಹರೀರದಿಂದ ಕೂದಲು ಕಳೆದುಕೊಂಡೊಡನೆಯೇ ಸಾವನ್ನು
       
ಅಪ್ಪುವ ಜಿಂಕೆಗೆ ಹೋಲುವರು.
970. ತಮಗೆ ಅವಮಾನವಾಗುವ ಸಂದರ್ಭದಲ್ಲಿ ಬಾಳು ನೀಗುವ ಅಭಿಮಾನನಧರ ಕೀರ್ತಿಯನ್ನು ಲೋಕದ ಜನರು ಪೂಜಿಸಿ
       
ಗೌರವಿಸುವರು.

ಅಧ್ಯಾಯ 98. ಹಿರಿಮೆ.

971. ಒಬ್ಬನ ಬಾಳಿನಲ್ಲಿ ಬೆಳಕೆಂದರೆ ಅವನಲ್ಲಿರುವ ಶಕ್ತಿಯೇ; ಒಬನ ಬಾಳಿನಲ್ಲಿ ಕತ್ತಲೆಂದರೆ, ಅದು ಇಲ್ಲದೆಯೇ ಬಾಳಬಹುದು ಎಂಬ
       
ಅವನ ಎಣಿಕೆ.
972. ಎಲ್ಲಾ ಜೀವಿಗಳಿಗೂ ಹುಟ್ಟು ಒಂದೇ ರೀತಿಯದು; ಆದರೆ, ಅವರವರು ಮಾಡುವ ಕೆಲಸಗಳು ಬೇರೆಬೇರೆಯಾಗಿರುವುದರಿಂದ,
       
ಕೀರ್ತಿ ಪ್ರತಿಷ್ಠೆಗಳು ಭಿನ್ನವಾಗಿರುತ್ತದೆ.
973. ಮೇಲಾದ ಸ್ಥಿತಿಯಲ್ಲಿದ್ದರೂ ಕೂಡ, ಮೇಲಾದ ಗುಣವಿಲ್ಲದವರು ಮೇಲು ವರ್ಗದವರೆನಿಸಿಕೊಳ್ಳಲಾರರು; ಅದೇ ರೀತಿ, ಕೀಳು
       
ಸ್ಥಿತಿಯಲ್ಲಿದ್ದರೂ ಕೂಡ ಕೀಳಾದ ಗುಣ ಹೊಂದದವರು ಕೀಳು ವರ್ಗದವರೆಂದು ಎನಿಸಿಕೊಳ್ಳಲಾರರು.
974. ಏಕ ನಿಷ್ಠೆಯುಳ್ಳ ಹೆಂಗಸರಂತೆಯೇ ಹಿರಿಮೆಯೂ ಕೂಡ, ತನ್ನನ್ನು ತಾನು ಕಾಪಾಡಿಕೊಂಡು ನಡೆದುಕೊಂಡರೆ ಮಾತ್ರ ಉಂಟು.
975. ಹಿರಿಮೆಯು ಗುಣವುಳ್ಳವರು, ಕಷ್ಟ ಕಾಲದಲ್ಲಿಯೂ ಮಾಡೂವುದಕ್ಕೆ ಅಸಾಧ್ಯವಾದ ಕೆಲಸಗಳನ್ನು, ತಕ್ಕ ರೀತಿಯಲ್ಲಿ ಮಾಡಿ
       
ಮುಗಿಸಬಲ್ಲವರಾಗುತ್ತಾರೆ.
976. ಹಿರಿಯರ ಹಾದಿಯಲ್ಲಿ ನಡೆದು, ಅವರ ಗುಣಗಳನ್ನು ನಾವೂ ಪಡೆದುಕೊಳ್ಳಬೇಕು ಎನ್ನುವ ದೃಷ್ಟಿ ಅಲ್ಪರ ಮನಸ್ಸಿನಲ್ಲಿ ಬರುವುದಿಲ್ಲ.
977. ಕುಲ, ಸಂಪದ, ಶಿಕ್ಷಣ ಮೊದಲಾದ ಹಿರಿಮೆಯು ಕೀಳಾದವರ ಕೈಯಲ್ಲಿ ಸಿಕ್ಕಿಕೊಂಡರೆ, ದುರಹಂಕಾರವನ್ನು ವೃದ್ಧಿಪಡಿಸುತ್ತದೆ.
978. ಯಾವಾಗಲೂ ತಗ್ಗಿ ನಡೆಯುವುದೇ ಹಿರಿಯ ಗುಣ; ತಮ್ಮ ಪ್ರತಿಷ್ಠೆಯನ್ನು ಮರೆಸಿ ಕೊಂಡಾಡುವುದು ಕೀಳುಗುಣ.
979. ಹಿರಿಮೆಯ ಗುಣವೆಂದರೆ ಅಹಂಕಾರವಿಲ್ಲದೆ ಬಾಳುವುದು; ಕೀಳ್ತನವೆಂದರೆ ಅಹಂಕಾರವು ಬೇರೂರಿ ನಿಲ್ಲುವುದು.
980. ಹಿರಿಮೆಯ ಗುಣವು ಇತರರ ಗುಣದೋಷಗಳನ್ನು ಮರೆಯುವುದು; ಕೀಳುತನವಾದರೋ ಇತರರ ಗುಣದೋಷಗಳನ್ನೇ ಎತ್ತಿ
       
ಆಡುವುದು.

No comments:

Post a Comment