Sunday, 1 August 2010

ತಿರುಕ್ಕುಱಳ್: ಅಧ್ಯಾಯ 99-108



Thirukkural in Kannada
ತಿರುಕ್ಕುಱಳ್ (ಹೊಸಗನ್ನಡ ಅನುವಾದಗಳೊಂದಿಗೆ)



ಅರ್ಥ ಭಾಗ: ಅಧ್ಯಾಯ: 99-108

ಅಧ್ಯಾಯ 99. ಸದ್ಭಾವನೆ


981. ಕರ್ತವ್ಯವೇನೆಂಬುದನ್ನು ಅರಿತು ಸದ್ಭಾವವನ್ನು ಪಡೆದಿರುವವರಿಗೆ ಒಳ್ಳೆಯದೆಲ್ಲವೂ ಸಹಜವಾದ ಕ್ರಿಯೆಯಾಗಿರುವುದೆಂದು
       
ಹೇಳುವರು.
982. ಸಜ್ಜನರ ಸುಖ ಬಾಳುವೆಯೆನ್ನುವುದು ಅವರ ಗುಣದ ಒಳಿತಿಂದಲೇ ಉಂಟಾಗುವುದು; ಮಿಕ್ಕ ಇಂದ್ರಿಯಗಳಿಂದ ಬರುವ ಸುಖ,
       
ಬರಿಯು ಹೆಸರಿಗೆ ಮಾತ್ರ.
983. ಪ್ರೀತಿ, ವಿನಯಶೀಲತೆ, ಉಪಕಾರ, ಪ್ರಸನ್ನತೆ, ಸತ್ಯಶೀಲತೆಯೂ ಸೇರಿದ ಐದು ಗುಣಗಳು, ಸದ್ಭಾವನೆ ಎಂಬ ಕಟ್ಟಡವನ್ನು ಆಧರಿಸಿ
       
ನಿಂತಿರುವ ಆಧಾರಸ್ತಂಭಗಳು.
984. ಇತರ ಪ್ರಾಣಿಗಳನ್ನು ಕೊಲ್ಲದಿರುವ ಒಳ್ಳೆಯ ಗುಣವೇ ತಪಸ್ಸು; ಇತರರ ಕೆಡುಕನ್ನು ಎತ್ತಿ ಆಡದಿರುವ ಒಳ್ಳೆಯ ಗುಣವೇ ಸದ್ಭಾವನೆ.
985. ಬಲಶಾಲಿಗಳ ಸಾಮರ್ಥ್ಯವಿರುವುದು ಅವರು ತಗ್ಗಿ ನಡೆಯುವುದರಲ್ಲಿ; ಅದು ಸಜ್ಜನರು ತಮ್ಮ ಹಗೆಗಳನ್ನು  ಪರಿವರ್ತಿಸುವ
       
ಸಾಧನವೂ ಹೌದು.
986. ತಮಗೆ ಸಮಾನರಲ್ಲದವರಲ್ಲಿಯೂ ಸೋಲನ್ನು ಸ್ವೀಕರಿಸುವುದು, ಸದ್ಭಾವನೆಯೆಂಬ ಹೊನ್ನಿನ ಗುಣವನ್ನು ಅರಿಯುವ ಒರೆಗಲ್ಲು.
987. ತಮಗೆ ಅಹಿತವಾಗಿ ನಡೆದುಕೊಂಡವರಲ್ಲಿಯೂ ಹಿತವನ್ನೇ ಬಯಸದೆ ಹೋದರೆ ಅಂಥ ಸದ್ಭಾವನೆಯಿಂದ ಏನು ಸಾರ್ಥಕತೆ ಇದೆ?
988. ಒಬ್ಬನಿಗೆ ಸದ್ಭಾವನೆಯೆನ್ನುವ ಬಲವು ಬಂದಾಗ, ದಾರಿದ್ರ್ಯವು ಕೂಡ ಅವಮಾನಕರವೆನಿಸುವುದಿಲ್ಲ.
989. ಸದ್ಭಾವನೆಗಳ ಕಡಲು ಎಂದೆನಿಸಿಕೊಳ್ಳುವವರು, ಪ್ರಳಯ ಕಾಲ ಬಂದರೂ ತಾವು ಅಚಲರಾಗಿ ಉಳಿಯುವರು.
990. ಸಜ್ಜನರ ಸದ್ಭಾವನೆಯು ಕುಂದಿದರೆ, ವಿಸ್ತಾರವಾದ ಭೂಮಿಯು ಕೂಡ ತನ್ನ ಭಾರವನ್ನು ತಾಳಿಕೊಳ್ಳಲಾರದು.

ಅಧ್ಯಾಯ 100. ಸದ್ಗುಣವುಳ್ಳವರಾಗಿರುವುದು

991. ಒಬ್ಬನು ಎಲ್ಲರಲ್ಲಿಯೂ ಸುಲಭವಾಗಿ ಸೇರುವವನಾದರೆ, ಅವನಿಗೆ ಸದ್ಗುಣಗಳನ್ನು ಪಡೆಯುವುದೂ ಸುಲಭ ಎಂದು ಜ್ಞಾನಿಗಳು
       
ಹೇಳುವರು.
992. ಪ್ರೀತಿಯುಳ್ಳವರಾಗಿರುವುದು, ಹೆಸರಾದ ಕುಲದಲ್ಲಿ ಹುಟ್ಟಿದ ಕೀರ್ತಿ ಇರುವದು, ಇವೆರಡೂ ಗುಣವುಳ್ಳವರಾಗಿ ಬಾಳುವ
       
ಸನ್ಮಾರ್ಗಗಳೆನಿಸುವುವು.
993. ಮನುಷ್ಯರು ತಮ್ಮ ದೇಹದ ಅಂಗಾಂಗಗಳಲ್ಲಿ ಪರಸ್ಪರ ಹೋಲುವುದು ಹೋಲಿಕೆಯಲ್ಲ; ಹೊಂದಿಕೊಳ್ಳುವ ಗುಣಗಳಿಂದ
       
ಹೋಲುವುದೇ ನಿಜವಾದ ಹೋಲಿಕಯೆನಿಸುವುದು.
994. ಒಳ್ಳೆಯ ನಡತೆ, ಉಪ್ಕಾರ ಬುದ್ಧಿ, ಇವುಗಳಿಂದ ಇತರರಿಗೆ ಪ್ರಯೋಜನವಾಗುವಂತೆ ಬಾಳುವ, ಸಾರ್ಥಕ ಜೀವಿಗಳ
       
ಗುಣಗಳನ್ನು ಇಡೀ ಲೋಕವೇ ಕೊಂಡಾಡುತ್ತದೆ.
995. ವಿನೋದದಲ್ಲಿ ಕೂಡ ನಿಂದನೆಯು ದುಃಖವನ್ನು ತರುತ್ತದೆ; ಇತರರ ಸ್ವಭಾವವರಿತು ನಡೆಯುವ ಸದ್ಗುಣಿಗಳ ಹಗೆತನದಲ್ಲಿ
       
ಕೂಡ ಕರುಣೆ ತುಂಬಿರುತ್ತದೆ.
996. ಸದ್ಗುಣವುಳ್ಳವರನ್ನೇ ಆಧರಿಸಿಕೊಂಡು ಲೋಕದ ನಡೆ ನಿಂತಿದೆ. ಅದಿಲ್ಲವಾದರೆ, ಮಣ್ಣಿನಲ್ಲಿ ಸೇರಿ ಅದು ನಾಶವಾಗಿ
       
ಹೋಗುವುದು ನಿಶ್ಚಯ.
997. ಮಾನವೀಯ ಗುಣವನ್ನು ಹೊಂದಿರದೆ ಇರುವವರು, ಅರವನ್ನು ಹೋಲುವ ಹರಿತವಾದ ಬುದ್ಧಿಯುಳ್ಳವರಾದರೂ ಚಲನೆಯಿಲ್ಲದ
       
ಮರವನ್ನೇ ಹೋಲುತ್ತಾರೆ.
998. ಸ್ನೇಹವಿಲ್ಲದವರಾಗಿ ಕೆಟ್ಟದ್ದನ್ನೇ ಮಾಡುವವರಿಗೆ ಕೂಡ ಒಳ್ಳೆಯ ಗುಣಗಳನ್ನು ಪ್ರದರ್ಶಿಸದಿರುವುದು ಕೀಳ್ತರವೆನಿಸುವುದು.
999. ನಗಬಲ್ಲ ಗುಣವಿಲ್ಲದವರಿಗೆ ವಿಶಾಲವಾದ ಲೋಕದಲ್ಲಿ ಹಗಲಿನಲ್ಲೂ ಕತ್ತಲೆಯೇ ಕಾಣುವುದು.
1000. ಗುಣವಿಲ್ಲದವನ ಕೈಲಿರುವ ಅತುಳವಾದ ಐಶ್ವರ್ಯವು ಕೊಳಕು ಪಾತ್ರಯಲ್ಲಿಟ್ಟು ಒಳ್ಲೆಯ ಹಾಲಿನಂತೆ ಶೀಘ್ರವೇ ಕೆಟ್ಟು ಹೋಗುತ್ತದೆ.

ಅಧ್ಯಾಯ 101. ನೆರವಿಗೆ ಬಾರದ ಸಿರಿ

1001. ಒಬ್ಬನು ಮನೆತುಂಬ ಹೇರಳವಾದ ಸಿರಿಯನ್ನು ಸಂಗ್ರಹಿಸಿಟ್ಟು ಅದನ್ನು ಅನುಭವಿಸದೆ ಹೋದಲ್ಲಿ, ಬದುಕ್ಕಿದ್ದೂ ಸತ್ತಹಾಗೆ;
         
ಸಿರಿಯಿಂದ ಯಾವ ಉಪಯೋಗವೂ ಇಲ್ಲವಾಗುವುದು.
1002. ಸಿರಿಯಿಂದಲೇ ಎಲ್ಲ (ಸುಖ ಸಾಧನಗಳು) ಉಂಟಾಗುವುದೆಂದು ತಿಳಿದು ಪರರಿಗೆ ಕೂಡದಿರುವ ಕೈಪಣತನದ ಭ್ರಮೆಯಿಂದ
         
ಕೀಳಾದ ಜನ್ಮ ಉಂಟಾಗುವುದು.
1003. ಕೂಡಿಟ್ಟ ಸಿರಿಯನ್ನೇ ಬಯಸುತ್ತ (ಶಾಶ್ವತವಾದ) ಕೀರ್ತಿಯನ್ನು ಕಡೆಗಣಿಸುವ ಜನರ ಬಾಳು, ಭೂಮಿಗೆ ಭಾರವಾಗುರುವುದು.
1004. ಪರೋಪಕಾರ ಗುಣದಿಂದ ಒಬ್ಬರ ಪ್ರೀತಿಗೂ ಪಾತ್ರನಾಗದವನು, ತಾನು ಸತ್ತಮೇಲೆ ತನ್ನ ಬಳಿ ಯಾವುದು ಸ್ಥಿರವಾಗಿ
         
ಉಳಿಯುವುದೆಂದು ಭಾವಿಸುತ್ತಾನೆ?
1005. ಪರರಿಗೆ ಕೊಡುವ ಉದಾರ ಬುದ್ಧಿಯಾಗಲೀ, ತಾನು ಅನುಭವಿಸಿ ಸುಖಪಡುವ ಧಾರಾಳ ಬುದ್ಧಿಯಾಗಲೀ ಇಲ್ಲದವರಿಗೆ
         
ಮೇಲೆ ಮೇಲೆ ಹೇರಿಸಿಟ್ಟ ಹಣ ಕೋಟಿಗಟ್ಟಲೆ ಬಂದೂದಗಿದರೂ ಅದರಿಂದ ಪ್ರಯೋಜನವಿಲ್ಲ.
1006. ತಾನು ಅನುಭವಿಸದೆ, ತಕ್ಕವರಿಗೆ ಕೊಟ್ಟು ನೆರವಾಗುವ ಸ್ವಭಾವವೂ ಇಲ್ಲದೆ ಬಾಳುವವನು, ತನ್ನಲಿರುವ ಹೇರಳವಾದ
         
ಹಣಕ್ಕೆ ತಾನೇ ಕುತ್ತಾಗಿ ಪರಿಣಮಿಸುವನು.
1007. ಕೈಲಾಗದ ಬಡ ಜನರಿಗೆ ಸಹಾಯ ಮಾಡದವನ ಸಿರಿಯು, ಅತಿ ಸುಂದರಿಯಾದ ಒಬ್ಬ ಹೆಣ್ಣು (ಗಂಡನಿಲ್ಲದೆ) ಏಕಾಂಗಿಯಾಗಿ
         
ಬಾಳಿ ಮುದುಕಿಯಾದಂತೆ.
1008. ಪರೋಪಕಾರ ಗುಣವಿಲ್ಲದೆ ಯಾರಿಗೂ ಬೇಡಾದವನ ಸಿರಿಯು ಊರಿನ ಮಧ್ಯದಲ್ಲಿ ವಿಷಪೂರಿತವಾದ ಇಟ್ಟಿಯ ಮರವು
         
ಫಲ ಬಿಟ್ಟಂತೆ.
1009. ಪ್ರೀತಿ ಇಲ್ಲದೆ. ತನ್ನನ್ನು ಕಷ್ಟಕ್ಕೆ ಗುರಿಪಡಿಸಿಕೊಂಡು, ಧರ್ಮವನ್ನು ಲೆಕ್ಕಿಸದೆ, ಸೇರಿಸಿಟ್ಟ ಒಬ್ಬನ ಹೇರಳವಾದ ಸಿರಿಯನ್ನು
          (
ಕೊನೆಯಲ್ಲಿ) ಪಡೆದು ಅನುಭವಿಸುವವರು ಬೇರೆಯವರೇ.
1010. ಕೀರ್ತಿಶಾಲಿಗಳಾದ ಸಿರಿವಂತರ ಅಲ್ಪ ಕಾಲದ ಬಡತನವು, ಲೋಕದನೆಲೆಗೆ ಕಾರಣವಾದ ಮೋಡಗಳು ಆಕಾಶದಲ್ಲಿ
         
ಚೆದುರಿ ಬಡವಾದಂತೆ.

ಅಧ್ಯಾಯ 102. ವಿನಯವಂತರಾಗಿರುವುದು

1011. ತಾನು ಮಾಡಿದ ಹೇಯ ಕಾರ್ಯಗಳಿಗಾಗಿ ನಾಚುವುದೇ ವಿನಯವಂತಿಕೆಯೆನಿಸುವುದು; ಅದಲ್ಲದೆ ಸುಂದರಾಂಗನೆಯರ
          (
ಸ್ವಾಭಾವಿಕ) ಬಾಚಿಕೆಯು ಬೇರೆ ಬಗೆಯದು.
1012. ಊಟ, ಬಟ್ಟೆ ಮಿಕ್ಕೆಲ್ಲವುಗಳೂ ಜೀವಿಗಳಿಗೆಲ್ಲ ಸಾಮಾನ್ಯವಾದ ಗುಣ; ಆದರೆ ವಿನಯವಂತಿಕೆಯನ್ನು ಗಳಿಸುವುದು ಸದ್ಗುಣವುಳ್ಳ
         
ಮಾನವರ ವಿಶಿಷ್ಟ ಗುಣ.
1013. ಎಲ್ಲಾ ಜೀವಿಗಳಿಗೂ ಮಾಂಸ ಮಜ್ಜೆಗಳಿಂದ ಕೂಡಿದ ಶರೀರವೇ ನೆಲೆಯಾಗಿರುವಂತೆ, ಸಜ್ಜನಿಕೆಗೆ ನಾಚಿಕೆಯೆನ್ನುವ
         
ನಮ್ರಗುಣವೇ ನೆಲೆಯಾಗಿರುವುದು.
1014. ಸಜ್ಜನರಿಗೆ ವಿನಯವಂತಿಕೆ ಎನ್ನುವುದು ಒಂದು ಅಲಂಕಾರವಲ್ಲವೇ? ಅಲಂಕಾರವಿಲ್ಲದೆ ಹೋದಲ್ಲಿ ದೊಡ್ಡ ರೀತಿಯ
         
ನಡೆಯು ಒಂದು ಕುತ್ತು (ರೋಗ) ಎನಿಸಿಕೊಳ್ಳುವುದಿಲ್ಲವೆ?
1015. ಇತರರ ಮೇಲಿನ ನಿಂದೆಗಾಗಲೀ, ತಮ್ಮ ಮೇಲಿನ ನಿಂದೆಗಾಗಲೀ ನಾಚಿಕೊಳ್ಳುವ ಸ್ವಭಾವವುಳ್ಳವರನ್ನು ವಿನಯವಂತಿಕೆಯ
         
ಆವಾಸಸ್ಥಾನವಾಗಿರುವರೆಂದು ಲೋಕವು ಹೇಳುತ್ತದೆ.
1016. ವಿನಯವಂತಿಕೆಯೆಂಬ ಬೇಲಿಯನ್ನು ತಮ್ಮ ಸುತ್ತ ಹಾಕಿಕೊಳ್ಳದೆ, ಮೇಲಾದವರು (ದೊಡ್ಡವರು) ವಿಶಾಲವಾದ
         
ಪ್ರಪಂಚದಲ್ಲಿ ಬಾಲುವೆ ನಡೆಸಲು ಇಚ್ಚಿಸುವುದಿಲ್ಲ.
1017. ವಿನಯವೇ ತಮ್ಮ ಗುಣವಾಗಿ ಉಳ್ಳವರು ಅದಕ್ಕಾಗಿ ತಮ್ಮ ಜೀವವನ್ನು ಕೊಡುವರು; ಜೀವವನ್ನು ಕಾಪಾಡುವ ಹಣಕ್ಕಾಗಿ
         
ತಮ್ಮ ವಿನಯವನ್ನು (ಎಂದಿಗೂ) ಬಿಡುವುದಿಲ್ಲ
1018. ಇತರರು ನಾಚುವಂಥ ಹೀನಕೆಲಸಕ್ಕೆ ತಾನು ನಾಚದೆ ಇರುವ ಪಕ್ಷದಲ್ಲಿ ಧರ್ಮವು ಅಂಥವನನ್ನು ಕಂಡು ನಾಚಿ ಕೈಬಿಡುತ್ತದೆ.
1019. ಒಬ್ಬನು ನಡತೆ ತಪ್ಪಿದರೆ, ಅದು ಅವನ ಕುಲವನ್ನು ಸುಟ್ಟು ನಾಶಮಾಡುತ್ತದೆ; ವಿನಯವನ್ನು ಕೈಬಿಟ್ಟರೆ ಅದು ಅವನ
         
ಏಳ್ಗೆಯೆಲ್ಲವನ್ನೂ ನಾಶ ಮಾಡುತ್ತದೆ.
1020. ಅಂತರಂಗದಲ್ಲಿ ನಾಚಿಕೆ ಪಡೆದಿರುವವರು ಲೋಕದಲ್ಲಿ ಓಡಾಡುವುದು, ಸೂತ್ರದ ದಾರದಿಂದ ಚಲಿಸುತ್ತ ಜೀವವಿರುವಂತೆ
         
ಭ್ರಮೆಯನ್ನು ಹುಟ್ಟಿಸುವ ಮರದ ಬೊಂಬೆಯನ್ನು ಹೋಲುವುದು.

ಅಧ್ಯಾಯ 103. ವಂಶಪಾಲನೆಯ ಬಗೆ

1021. ವಂಶಪಾಲನೆಗಾಗಿ ಕರ್ತವ್ಯವನ್ನು ಮಾಡುವುದಕ್ಕೆ ನಾನು ಹಿಂದೆಗೆಯುವುದಿಲ್ಲ ಎಂದು ಒಬ್ಬನು ಪ್ರಯತ್ನ ನಡೆಸುವ
         
ಹಿರಿಮೆಗಿಂತ ಮೇಲಾದುದು ಬೇರಾವುದೂ ಇಲ್ಲ.
1022. ಮನುಷ್ಯ ಪ್ರಯತ್ನ, ತುಂಬಿದ ಅರಿವು- ಎರಡರ ನಿರಂತರೆ ಸಾಧನೆಯಿಂದ ವಂಶದ ಕೀರ್ತಿಯು ಮೇಲೇರಿ ಬೆಳಗುತ್ತದೆ.
1023. ನನ್ನ ವಂಶದ ಕೀರ್ತಿಯನ್ನು ಬೆಳಗುತ್ತೇನೆಂದು ಪಣತೊಟ್ಟ ಒಬ್ಬನಿಗೆ ದೇವತೆಯು ಸಮಸ್ತ ವಸ್ತ್ರಾಲಂಕೃತವಾಗಿ ತಾನೇ
         
ಮುಂದೆ ಬಂದು ಸಹಾಯಮಡುತ್ತವೆ.
1024. ತಮ್ಮ ವಂಶವನ್ನು ಬೆಳಗುವ ಕಾರ್ಯದಲ್ಲಿ ನಿಧಾನಿಸದೆ, ಕೂಡಲೇ ಪ್ರಯತ್ನ ನಡೆಸುವವರಿಗೆ ಅವರು ಆಲೋಚಿಸುವುದಕ್ಕೆ
         
ಮುಂಚೆಯೇ ತಾನಾಗಿಯೇ ಸಿದ್ಧಿಯಾಗುತ್ತದೆ.
1025. ಕೆಡುಕು ಮಾಡದವನಾಗಿ, ವಂಶದ ಕೀರ್ತಿಗೆ ತಕ್ಕ ಕಾರ್ಯಗಳನ್ನು ಮಾಡಿ ಬಾಳುಗೈಯುವವನನ್ನು ಲೋಕದ ಜನರು
         
ಬಂಧುವಿನಂತೆ ಪ್ರೀತಿಸಿ ಹತ್ತಿರಕ್ಕೆ ಬರುತ್ತಾರೆ.
1026. ಒಬ್ಬನಿಗೆ ಒಳ್ಳೆಯ ಪೌರುಷತನವೆಂದರೆ, ತಾನು ಹುಟ್ಟಿದ ವಂಶವನ್ನು ಆಳುವ ಸಾಮರ್ಥ್ಯವನ್ನು ತನ್ನದಾಗಿ ಮಾದಿಕೊಳ್ಳುವುದು.
1027. ರಣರಂಗದಲ್ಲಿ ರಕ್ಷಣೆಯ ಭಾರವನ್ನು ಹೆದರದೆ ಹೊತ್ತ ವೀರರಂತೆ ತಮ್ಮ ಕುಟುಂಬ ವರ್ಗದ ಹೊಣೆಯನ್ನು ಸಮರ್ಥವಾಗಿ
         
ಹೊರಬಲ್ಲ ಶಕ್ತಿವಂತರ ಮೇಲೆಯೇ ವಂಶದ ಭಾರವಿರುತ್ತದೆ.
1028. ವಂಶದ ಕೀರ್ತಿಯನ್ನು ಬೆಳಸಲಿಚ್ಛಿಸುವವರಿಗೆ ತಕ್ಕ ಕಾಲವೆಂಬುದು ಬೇರೆ ಇಲ್ಲ; ಸೋಮಾರಿತನದಿಂದ ತಮ್ಮ ಹುಸಿ
         
ಅಭಿಮಾನವನ್ನು ಲೆಕ್ಕಿಸುವವರಾದರೆ ವಂಶದ ಹಿರಿಮೆಯು ನಾಶವಾಗುವುದು.
1029. ತನ್ನ ವಂಶದ ಅಪನಿಂದೆಗಳನ್ನು ನಿವಾರಿಸುವವನ ಶರೀರವು ದುಃಖಗಳನ್ನು ತುಂಬುವುದಕ್ಕಾಗಿತೇ ಇರುವ
         
ಪಾತ್ರಯಾಗಿರುವುದೋ?
1030. ಸಂಖಟ ಕಾಲದಲ್ಲಿ ಒಡನಿದ್ದು ಆಧಾರವಾಗಬಲ್ಲ ಒಳ್ಳೆಯ ವ್ಯಕ್ತಿಯು ಇಲ್ಲದಿದ್ದರೆ, ವಂಶವೃಕ್ಷವು ದುರ್ವಿಧಿಯೆಂಬ ಕೊಡಲಿ
         
ಏಟಿನಿಂದ ಕೆಳಗುರುಳುವುದು.

ಅಧ್ಯಾಯ 104. ವ್ಯವಸಾಯ ಉಳುವುದು

1031. ಲೋಕದ ಜನರು ಹಲವು ಉದ್ಯೋಗಗಳಲ್ಲಿ ಎಷ್ಟೇ ಸುತ್ತಾಡಿದರೂ ಅದು ನೇಗಿಲ ದುಡಿಮೆಗೆ ಹಿಂದ ನಿಲ್ಲುವಂಥರು; ಅದ್ದರಿಂದ
         
ಎಷ್ಟೇ ಶ್ರಮವಿದ್ದರೂ ಉಳುವ ದುಡಿಮೆಯೇ ಮೇಲಾದುದು.
1032. ಹೊಲದ ದಂಡಿಮೆಯುಳಿದು ಬೇರೆ ಕೆಲಸಗಳನ್ನು ಮಾಡುವ ಎಲ್ಲರ ಭಾರವನ್ನು ಉಳುವವನು ಹೊರುವುದರಿಂದ, ನೇಗಿಲ
         
ಯೋಗಿಯು, ಲೋಕ ರಥದ ಅಚ್ಚಿನ ಮೊಳೆಯಂತೆ ಇದ್ದಾನೆ.
1033. ಭೂಮಿಯನ್ನು ಉತ್ತು, ಪರರಿಗೆ ಉಣವಿತ್ತು ತಾವೂ ಉಂಟು ಸುಖಿಸುವರೈತರೇ ಬಾಳಿನ ಸುಖಕ್ಕೆ ಪಾಲುದಾರರು; ಉಳಿದವರೆಲ್ಲ
         
ಪರಾಶ್ರಯದಲ್ಲಿ ಬಾಳುನಡಸುವವರು.
1034. ಧಾನ್ಯದ ಬೆಳೆಯ ತಂಪಿನ ಛತ್ರದ ನೆರಳಲ್ಲಿ ಬಾಳುವವರು ಹಲವು ಅರಸರ ಛತ್ರದ ನೆರಳನ್ನು ತಮ್ಮ ಅರಸನ
         
ಛತ್ರದಡಿಯಲ್ಲೇ ಕಾಣುವರು.
1035. ಕೈಯಾರೆ ಶ್ರಮಪಟ್ಟು ಕೆಲಸಮಾಡಿ ಉಣ್ಣುವ ಗುಣವುಳ್ಳವರು ಪರರಲ್ಲಿ ಬೇಡುವುದಿಲ್ಲ; ತಮ್ಮ ಬಳಿ ಬೇಡಲು ಬಂದವರಿಗೆ
         
ವಂಚನೆಯಿಲ್ಲದೆ ಕೊಡುವರು.
1036. ಉಳುವವರು ಕೆಲಸ ಮಾಡುವುದನ್ನು ನಿಲ್ಲಿಸಿದರೆ, ಆಶೆಗಳನ್ನೆಲ್ಲ ತೋರದಿದ್ದೇವೆ ಎನ್ನುವ ಸನ್ಯಾಸಿಗಳಿಗೂ ಬಾಳಿನಲ್ಲಿ ನೆಲೆ
         
ಇಲ್ಲವಾಗುತ್ತದೆ.
1037. ಒಂದು ಬೊಗಸೆ ಮಣ್ಣು ಕಾಲು ಬೊಗಸೆಯಾಗುವಂತೆ ಚೆನ್ನಾಗಿ ಉತ್ತುಕಾಯಲು (ಒಣಗಲು) ಬಿಟ್ಟರೆ, ಒಂದು ಹಿಡಿ
         
ಗೊಬ್ಬರವೂ ಇಲ್ಲದೆ ಪೈರು ಹುಲುಸಾಗಿ ಬೆಳೆಯುತ್ತದೆ.
1038. ನೇಗಿಲಿನಿಂದ ಉಳುವುದಕ್ಕಿಂತ, ಭೂಮಿಗೆ ಸಾರ ನೀಡುವುದು ಒಳ್ಲೆಯುದು; ಕಳೆಯನ್ನು ತೆಗೆದ ಮೇಲೆ, ನೀರು
         
ಹಾಯಿಸುವುದಕ್ಕಿಂತ (ಬೆಳೆಯ) ಕಾವಲು ಕಾಯುವುದು ಮೇಲು.
1039. ನೆಲದೊಡೆಯನಾದವನು ತನ್ನ ನೆಲವನ್ನು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ, ಕುಪಿತಳಾದ ಕೆಂಡತಿಯಂತೆ, ಅವನಲ್ಲಿ
         
ನೆಲವು ಅಸಹಕಾರವನ್ನು ತೋರುತ್ತದೆ.
1040. ತಮ್ಮಲ್ಲಿ ಏನೂ ಇಲ್ಲವೆಂದು ದಾರಿದ್ರ್ಯವನ್ನು ತೋರಿಸುತ್ತ ಆಲಸ್ಯದಿಂದ ಕಾಲಹರಣ ಮಾಡುವವನನ್ನು ಕಂಡು ಬೆಡಗಿನ
         
ನೆಲವಣ್ಣು (ತಿರಸ್ಕಾರದಿಂದ) ನಗುತ್ತಾಳೆ.

ಅಧ್ಯಾಯ 105. ಬಡತನ

1041. ಬಡತನಕ್ಕಿಂತ ದುಃಖಕರವಾದುದು ಯಾವುದು? ಬಡತನಕ್ಕಿಂತ ದುಃಖಕರವಾದುದು, ಬಡತನವೇ.
1042. ಬಡತನವೆಂಬ ಪಾಪಿಯು ಒಬ್ಬನ ಮನೆಯನ್ನು ಪ್ರವೇಶಿಸಿದಲ್ಲಿ, ಅವನಿಗೆ ಇಹ ಜನ್ಮದಲ್ಲಿಯೂ ಮರು ಜನ್ಮದಲ್ಲಿಯೂ ಸುಖ
         
ಸಂತೋಷಗಳು ಇಲ್ಲವಾಗುವುದು.
1043. ದಾರಿದ್ರ್ಯದಿಂದುಂಟಾಗುವ ಆಸೆಯು, ಒಬ್ಬನ ವಂಶ ಪಾರಂಪರ್ಯವಾಗಿ ಬಂದ ಗುಣವನ್ನು, ಮಾತಿನ ಬಲ್ಲೆಯನ್ನೂ ಒಟ್ಟಿಗೇ
         
ಕೆಡಿಸುವುದು.
1044. ಬಡತನವೆನ್ನುವುದು ಒಳ್ಳೆಯ ಕಾಲದಲ್ಲಿ ಹುಟ್ಟಿದವರಲ್ಲೂ ಕೀಳಾದ ಮಾತು ಹೊರಡಲು ಕಾರಣವಾದ ಚಿತ್ತ ವಿಕಲ್ಪವನ್ನು ತರುತ್ತದೆ.
1045. ಬಡತನವೆನ್ನುವ ಸಂಕಟಕರವಾದ ನೆಲೆಯಲ್ಲಿ ಹಲವು ತೆರನಾದ ದುಃಖಗಳು ಬಂದು ಸೇರಿಕೊಳ್ಳುತ್ತವೆ.
1046. ಒಳ್ಳೆಯ ಗ್ರಂಥಗಳಲ್ಲಿರುವ ವಿಚಾರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಹೇಳಿದರೂ, ಬಡತನ ಹೊಕ್ಕವರು ಆಡಿದ ಮಾತಿನ
         
ಸತ್ವವು ಕೇಳುವವರಿಲ್ಲದೆ ನಿಷ್ಫಲವಾಗುವುದು.
1047. ದೈವ ಕೃಪೆಯಿಲ್ಲದೆ ದಾರಿದ್ರ್ಯಕ್ಕೊಳಗಾದವನನ್ನು ಹೆತ್ತ ತಾಯಿಯೇ ಪರಕೀಯನಂತೆ ಕಾಣುವಳು.
1048. ನಿನ್ನ ಕಷ್ಟಕ್ಕೇಡು ಮಾಡಿ (ನನ್ನನ್ನು) ಕೊಂದ ಬಡತನವು ಇಂದೂ (ನನ್ನಬಳಿ) ಬರಲಿದೆಯೇ? (ಎಂದು ಬಡವನಾದವನು
         
ಪ್ರತಿದಿನವೂ ಚಿಂತಿಸುತ್ತನೆ)
1049. ಒಬ್ಬನು ಬೆಂಕಿಯ ನಡುವೆ ಮಲಗಿ ನಿದ್ರಿಸಬಹುದು; (ಆದರೆ) ಬಡತನದ ನಡುವೆ ನಿದ್ರಿಸುವುದು ಅಸಾಧ್ಯ.
1050. ಭೋಗಿಸಲು ಹಣವಿಲ್ಲದ ಬಡವರು, ತಮ್ಮ ಒಡಲನ್ನು ತೊರೆಯದೆ ಕಾರಣ, ಕಂಡವರ ಉಪ್ಪಿಗೂ ಗಂಜಿಗೂ ಯಮನಾಗುವರು.

ಅಧ್ಯಾಯ 106. ಭಿಕ್ಷಾಟನ

1051. ಬೇಡಲು ತಕ್ಕವರನ್ನು ಕಂಡರೆ ಬೇಡಿಕೊಳ್ಳಬೇಕು; ಅವರು ಕೊಡಗೆ ತಿರಸ್ಕರಿಸಿದರೆ, ದೋಷವು ಅವರಿಗೇ ವಿನಾ
         
ಬೇಡುವವನದಲ್ಲ.
1052. ಬೇಡಿನ ವಸ್ತುಗಳು ದುಃಖವುಂಟಾಗದೆ ಮನ ಮೆಚ್ಚಿ ಕೊಡಲ್ಪತ್ತರೆ, ಯಾಚನೆಯು ಬೇಡಿದವನಿಗೆ ಸುಖಕರವೇ ಆಗುತ್ತದೆ.
1053. ಮನಸ್ಸಿನಲ್ಲಿ ಕೈಪಣತೆಯಿಲ್ಲದೆ, ಕರ್ತವ್ಯವೆಂದು ತಿಳಿದು ಕೊಡುವ ದಾನಿಗಳಮುಂದೆ ನಿಂತು ಬೇಡುವುದರಲ್ಲೂ ಒಂದು
         
ಬಗೆಯ ಸೊಬಗು ಇರುತ್ತದೆ.
1054. ಕೃಪಣತೆಯನ್ನು ಕನಸಿನಲ್ಲಿಯೂ ಅರಿಯದವರ ಬಳಿ ಬೇಡಿ ಪಡೆದುಕೊಳ್ಳುವುದು. ತಾವೇ ದಾನ ಮಾಡಿದುದಕ್ಕೆ ಸಮಾನ.
1055. ಕೃಪಣ ಸ್ವಭಾವವಿಲ್ಲದವರು ಲೋಕದಲ್ಲಿ ಸಹಜವಾಗಿ ಇರುವುದರಿಂದಲೇ ಬೇಡುವವರು ಅವರ ಮುಂದೆ ನಿಂತು
         
ಬೇಡಿಕೊಳ್ಳುವುದು.
1056. ಜೆಪುಣತನವೆಂಬ ರೋಗವಿಲ್ಲದವರನ್ನು ಕಂಡರೆ, ಬಡತನವೆಂಬ ರೋಗವು ಒಂದೇ ಸಲಕ್ಕೆ ನಾಶವಾಗುವುದು.
1057. ತೆಗಳಿ ನಿಂದನೆ ಮಾಡದೆ ಕೊಡುಗೈಯಿಂದ ಕೊಡುವವರನ್ನು ಕಂಡರೆ ಬೇಡುವವರ ಮನಸ್ಸು ಆನಂದದಿಂದ 
         
ಒಳಗೊಳಗೇ ಸಂತೋಷಪಡುತ್ತದೆ.
1058. ಬೇಡುವವರೇ ಇಲ್ಲವಾದರೆ, ತಂಪಾದ ವಿಶಾಲ ಭೂಮಿಯಲ್ಲಿ ವಾಸಿಸುವ ಜನರ ಚಲನೆಯು, ಸೂತ್ರದಿಂದ ಆಡಿಸುವ
         
ಮರದ ಬೊಂಬೆಯ ಚಲನೆಗೆ ಹೋಲುವುದು.
1059. ಬೇಡಿ ಪಡೆದುಕೊಳ್ಳುವವರೇ ಇಲ್ಲವಾದ ಪಕ್ಷದಲ್ಲಿ ಕೂಡುವ ಮನಸ್ಸುಳ್ಳವರಿಗೆ ಯಾವ ಕೀರ್ತಿ ಉಂಟಾಗುತ್ತದೆ?
1060. ಬೇಡುವವನು ಕೋಪಿಸಿಕೊಳ್ಳದಿರಬೇಕು; ಅವನ ಪಡೆದಿರುವ ಬಡತನವೆಂಬ ದುಃಖವೇ ಅವನಿಗೆ ಅರಿವು ತೋರುವ
         
ನಿಷ್ಛಳವಾದ ಸಾಕ್ಷಿ.

ಅಧ್ಯಾಯ 107. ಬಿಕ್ಷಾಟನೆಯ ಭಯ

1061. ತಿರಸ್ಕಾರ ಮಾಡದೆ ಸಂತೋಷದಿಂದ ದಾನ ಮಾಡುವ, ಕರುಣೆಯ ಕಣ್ಣುಳ್ಳವರ ಬಳಿಯೂ, ಭಿಕ್ಷೆ ಬೇಡದಿರುವುದೇ ಕೋಟಿ
          
ಪಾಲು ಉತ್ತಮ.
1062. ಲೋಕವನ್ನು ಸೃಷ್ಟಿಸಿದವನು ಜನರು ಭಿಕ್ಷೆ ಬೇದಿ ಜೀವನ ಬಡೆಸಬೇಕೆಂದು ಇಚ್ಛಿಸಿದಲ್ಲಿ ಅವನೂ ಬೇಡುವವರಂತೆ ತಿರಿದು
          
ಅಲೆದಾಡಿ ಕೆಡಲಿ!
1063. ಬಡತನವೆಂಬ ದುಃಖವನ್ನು ಭಿಕ್ಷೆ ಬೇಡಿ ತೀರಿಸುತ್ತೇವೆ ಎಂದು ಯೋಚಿಸಿ ಪ್ರಯತ್ನಶೀಲತೆಯನ್ನು ಕೈಬಿಡುವ ಕಠಿಣತೆಗಿಂತ,
         
ಕಠಿಣವಾದುದು ಬೇರೊಂದು ಇಲ್ಲ.
1064. ಬಾಳುವ ಮಾರ್ಗವಿಲ್ಲದಿರುವ ಸಮಯದಲ್ಲಿಯೂ ಭಿಕ್ಷೆ ಬೇಡದಿರುವ ದೊಡ್ಡ ಗುಣವು ಎಲ್ಲ ಲೋಕಗಳಲ್ಲಿಯೂ ಮಿಗಿಲಾದ
         
ಹಿರಿಮೆಯುಳ್ಳದು.
1065. ಬೇಯಿಸಿಟ್ಟ ತಿಳಿ ನೀರಿನ ಗಂಜೆಯೇ ಆದರೂ ಪ್ರಯತ್ನಪೂರ್ವಕವಾಗಿ ದೊರೆತುದನ್ನು ಊಟ ಮಾಡುವುದಕ್ಕಿಂತ ಹೆಚ್ಚು
         
ಸವಿಯಾದುದು ಬೇರಿಲ್ಲ.
1066. ಸಾಯುವ ಸ್ಥಿತಿಯಲ್ಲಿರುವ ಹಸುವಿಗಾಗಿ ಕರುಣೆಯಿಂದ ನೀರನ್ನು ಬೇಡುವ ಸ್ಥಿತಿ ಬಂದರೂ ಬೇಡುವ ನಾಲಿಗೆಗೆ ಅದಕ್ಕಿಂತ
         
ಅವನತಿ ಬೇರಿಲ್ಲ.
1067. ಬೇಡುವವರಿಲ್ಲ (ನನ್ನದೊಂದು) ಬೇಡಿಕೆ- "ಬೇಡುವುದಾದರೂ, ಕೊಡಲು ಮನಸ್ಸಿಲ್ಲದವರ ಬಳಿ ಬೇಡದಿರಿ" ಎಂದು
1068. ಬೇಡುವಿಕೆಯೆನ್ನುವ ಕಾವಲಿಲ್ಲದ ದೋಣಿಯು, ತಿರಸ್ಕಾರವೆನ್ನುವ ಹೆಬ್ಬಂಡೆಯನ್ನು ತಗುಲಿದಾಗ ಒಡೆದು ಚೂರಾಗುವುದು.
1069. ಬೇಡುವುದರ ನೆಲೆಯನ್ನು ನೆನೆಸಿಕೊಂಡರೆ ಹೃದಯವು ಕರಗಿ ಹೋಗುತ್ತದೆ; ಇರುವುದನ್ನು ಕೊಡದೆ ತಿರಸ್ಕರಿಸುವ ನಿರ್ದಯ
         
ಮನಸ್ಸನ್ನು ನೆನೆಸಿಕೊಂಡರೆ ಕರಗಿ ಉಳಿದ ಹೃದಯವೂ ಇಲ್ಲದಂತೆ ನಾಶವಾಗುತ್ತದೆ.
1070. ಬೇಡುವವರಿಗೆ 'ಇಲ್ಲ' ಎಂದು ಹೇಳಿದ ಕೊಡಲೇ ಜೀವವು ಹೋಗಿ ಬಿಡುವುದು; ಇರುವುದನ್ನು ಇಲ್ಲ ಎಂದು ಹೇಳಿ ಅಟ್ಟುವ
          (
ಜಿಪುಣರ), ಪ್ರಾಣವು ಎಲ್ಲಿ ಅವಿತುಕೊಂಡಿರುತ್ತದೆಯೂ!

ಅಧ್ಯಾಯ 108. ಕೀಳುತನ

1071. ಕೀಳು ಜನರು (ಆಕಾರದಲ್ಲಿ) ಮನುಷ್ಯರನ್ನೇ ಹೋಲುತ್ತಾರೆ; ಇಂಥ ಹೋಲಿಕೆ (ಬೇರೆ ಯಾವ ಇಬ್ಬಗೆಯ ವಸ್ತುಗಳಲ್ಲಿಯೂ)
         
ನಾನು ಕಂಡುದಿಲ್ಲ.
1072. ಒಳ್ಳೆಯದನ್ನು ಅರಿತವರಿಗಿಂತ ಕೀಳ್ತರದ ಜನರೇ ಹೆಚ್ಚು ಸುಖಿಗಳು; ಏಕೆಂದರೆ ಅವರ ಹೃದಯದಲ್ಲಿ ಯಾವ ಬಗೆಗೂ
         
ಕಳವಳವೇ ಇರುವುದಿಲ್ಲ.
1073. ಕೀಳು ಜನರು ದೇವರ ಸಮಾನರು! ಏಕೆಂದರೆ, ಅವರೂ ಕೂಡ ದೇವರಂತೆ ತಾವು ಮನಸ್ಸಿನಲ್ಲಿ ಇಷ್ಟಪಟ್ಟಂತೆ ನಡೆದುಕೊಳ್ಳುತ್ತಾರೆ!
1074. ಕೀಳಾದವರು, ತಮಗಿಂತ ಕೀಳಾಗಿ ನಡೆದುಕೊಳ್ಳುವವರನ್ನು ಕಂಡರೆ ಅವರಿಗಿಂತ ತಾವೆ ಮೇಲು ಎಂದು ಹೆಮ್ಮೆಪಟ್ಟುಕೊಳ್ಳುವರು.
1075. ಕೀಳು ಜನರು  ಸರಿಯಾಗಿ ನಡೆದುಕೊಂಡರೆ ಅದಕ್ಕೆ ಅರಸನ ಭಯವೇ ಕಾರಣ; ಅದಿಲ್ಲವಾದರೆ ಅವರಲ್ಲಿ ಹುಟ್ಟಿದ ಲಾಭದ ಆಶೆಯ
         
ಕಾರಣವಾಗಿಯೂ ಸ್ವಲ್ಪ ಒಳ್ಳೆಯ ನಡತೆಕಾಣಿಸಿಕೊಳ್ಳುವುದು.
1076. ಕೀಳಾದ ಜನರು ತಾವು ಕೇಳಿ ತಿಳಿದ ರಹಸ್ಯ ವಿಶಯಗಳನ್ನು ಇತರರಿಗೆ ಒಯ್ದು ಬಯಲು ಮಾಡುವುದರಿಂದ ಅವರನ್ನು
         
ಪ್ರಚಾರಕ್ಕೆ ಬಳಿಸುವ ನಗಾರಿಗೆ ಹೋಲಿಸಬಹುದು.
1077. ಕೀಳು ಜನರು, ತಮ್ಮ ದವಡೆಗೆ ಹೊಡೆಯಲು ಮಡಿಚಿದ ಕೈಯುಳ್ಳವರಿಗಲ್ಲದೆ ಉಳಿದವರಿಗೆ ಉಂಡ ಎಂಜಲು ಕೈಯನ್ನು
         
ಅದುರಿಸುವುದಿಲ್ಲ.
1078. ದೊಡ್ಡವರು ಕೊರತೆಯನ್ನು ಹೇಳಿಕೊಂಡೊಡನೆಯೇ ನೆರವಾಗುವರು; ಆದರೆ ಕೀಳಾದ ಜನರು ಕಬ್ಬಿನ ಜಲ್ಲೆಯಂತೆ, ಅರೆದು
         
ಜಜ್ಜಿದ ಮೇಲೇ ನೆರವಿಗೆ ಬರುವರು.
1079. ಕೀಳಾದ ಜನರು ಇತರರು ಚೆನ್ನಾಗಿ ಇಡುವುದನ್ನೂ ಉಣ್ಣುವುದನ್ನೂ ಕಂಡಾಗ ಅವರನ್ನು ಸಹಿಸದೆ, ಅವರಲ್ಲಿ ಇಲ್ಲದ
         
ದೋಷವನ್ನು ಕಾಣಲು ಯತ್ನಿಸುವರು.
1080. ಕೀಳಾದ ಜನರು ಯಾವುದಕ್ಕೆ ತಾನೆ ಯೋಗ್ಯರು? ಕಪ್ಪ ಕಾಲದಲ್ಲಿ ತಮ್ಮನ್ನು ತಾವೇ ಬೆಲೆಗೆ ಮಾರಿಕೊಳ್ಳಲು ಮಾತ್ರ
         
ಯೋಗ್ಯರು (ಅವರು)

No comments:

Post a Comment